ETV Bharat / international

ಮಿ - 8 ಹೆಸರಿನ ಹೆಲಿಕಾಪ್ಟರ್ ಪತನ: ಮೂವರ ಸಾವು - ರಷ್ಯಾದ ಮಾಸ್ಕೋ ಬಳಿ ಮಿ-8 ಹೆಲಿಕಾಪ್ಟರ್ ಪತನ

ರಷ್ಯಾದ ಮಾಸ್ಕೋ ಬಳಿ ಮಿ-8 ಹೆಲಿಕಾಪ್ಟರ್ ಪತನಗೊಂಡಿದ್ದು, ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಮಿ -8 ಹೆಲಿಕಾಪ್ಟರ್​ನಲ್ಲಿ ಮೂವರು ಸಿಬ್ಬಂದಿ ಕ್ಲಿನ್ ನಗರದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ ತರಬೇತಿಗಾಗಿ ಹಾರಾಟ ನಡೆಸುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ.

Mi-8 helicopter
ಮಿ-8 ಹೆಲಿಕಾಪ್ಟರ್ ಪತನ
author img

By

Published : May 20, 2020, 7:08 PM IST

ಮಾಸ್ಕೋ(ರಷ್ಯಾ): ಇಲ್ಲಿನ ವಾಯುವ್ಯ ಪ್ರದೇಶದಲ್ಲಿ ಮಿ-8 ಹೆಲಿಕಾಪ್ಟರ್ ಪತನವಾಗಿದ್ದು, ಇದರಲ್ಲಿದ್ದ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ತುರ್ತು ಸೇವೆಗಳ ವಕ್ತಾರರು ತಿಳಿಸಿದ್ದಾರೆ.

ಮಿ -8 ಹೆಲಿಕಾಪ್ಟರ್​ನಲ್ಲಿ ಮೂರು ಜನ ಸಿಬ್ಬಂದಿ ಕ್ಲಿನ್ ನಗರದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ ತರಬೇತಿಗಾಗಿ ಹಾರಾಟ ನಡೆಸುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದ್ದು, ಇದರಲ್ಲಿದ್ದ ಮೂವರು ಸಾವಿಗೀಡಾಗಿದ್ದಾರೆ.

ಅಪಘಾತದ ಕುರಿತು ಖಚಿತ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಎರಡು ಬ್ಲ್ಯಾಕ್​ ಬಾಕ್ಸ್​ ಪತ್ತೆಯಾಗಿವೆ. ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಆನ್-ಬೋರ್ಡ್ ವಾಯ್ಸ್ ರೆಕಾರ್ಡರ್ ಎಂಬ ಸಾಧನಗಳು ಪತ್ತೆಯಾಗಿದ್ದು, ಈ ಬಗ್ಗೆ ವಿವರಣೆ ಪಡೆಯಬೇಕಿದೆ.

ಇದರಲ್ಲಿ ಯುದ್ಧ ಸಾಮಗ್ರಿಗಳನ್ನು ಹೊತ್ತೊಯ್ಯದೇ ಹಾರಾಟ ನಡೆಸಲಾಗಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.