ETV Bharat / international

ಉಕ್ರೇನ್​ನಿಂದ ಪಾರಾಗಲು ಹರಸಾಹಸ; 8 ಕಿ.ಮೀ. ನಡೆದುಕೊಂಡೇ ಪೋಲೆಂಡ್​​ ಗಡಿಗೆ ಬಂದ 40 ಭಾರತೀಯ ವಿದ್ಯಾರ್ಥಿಗಳು - A group of around 40 Indian medical students of Daynlo Halytsky Medical University, Lviv walk towards the Ukraine-Poland border

ಮೊದಲ ಬ್ಯಾಚ್​ನಲ್ಲಿ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್-ರೊಮೇನಿಯಾ ಗಡಿಗೆ ತೆರಳಿದ್ದಾರೆ. ಗಡಿ ಸಮೀಪದವರೆಗೂ ವಿದ್ಯಾರ್ಥಿಗಳಿಗೆ ಡ್ರಾಪ್​ ನೀಡಲಾಗಿತ್ತು. ಅವರೆಲ್ಲ ಈಗ 8 ಕಿಮೀ ನಡೆದು ಪೋಲೆಂಡ್ ಗಡಿ​ ತಲುಪುತ್ತಿದ್ದಾರೆ.

ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ
ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ
author img

By

Published : Feb 25, 2022, 7:15 PM IST

Updated : Feb 25, 2022, 10:57 PM IST

ರೊಮೇನಿಯಾ ​(ಉಕ್ರೇನ್​): ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದ್ದಂತೆ ಅಲ್ಲಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ತವರನ್ನು ಸೇರಲು ತವಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಮೊದಲ ಬ್ಯಾಚ್​ನಲ್ಲಿ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್ - ರೊಮೇನಿಯಾ ಗಡಿಗೆ ತೆರಳಿದ್ದಾರೆ. ಈ ಮೂಲಕ ತವರಿಗೆ ಬರಲಿದ್ದಾರೆ.

ಎಂಇಎ ಕ್ಯಾಂಪ್ ಕಚೇರಿಗಳು ಪಶ್ಚಿಮ ಉಕ್ರೇನ್‌ನ ಎಲ್ವಿವ್ ಮತ್ತು ಚೆರ್ನಿವ್ಟ್ಸಿ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ರಷ್ಯನ್ ಮಾತನಾಡುವ ಅಧಿಕಾರಿಗಳನ್ನು ಈ ಶಿಬಿರದ ಕಚೇರಿಗಳಿಗೆ ಕಳುಹಿಸಲಾಗುತ್ತಿದೆ.

ಮೊದಲ ಬ್ಯಾಚ್​ನಲ್ಲಿ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್ - ರೊಮೇನಿಯಾ ಗಡಿಗೆ ತೆರಳಿದ್ದಾರೆ

ಇದನ್ನೂ ಓದಿ: ಅಪ್ಪಾ, ಅಮ್ಮಾ 'ಐ ಲವ್​ ಯೂ'... ವೈರಲ್​ ಆಯ್ತು ಉಕ್ರೇನ್​ ಯೋಧನ ಭಾವುಕ ವಿಡಿಯೋ

8 ಕಿ.ಮೀ. ನಡಿಗೆ: ಎಲ್ವಿವ್‌ನ ಡೇನ್‌ಲೋ ಹ್ಯಾಲಿಟ್‌ಸ್ಕಿ ವೈದ್ಯಕೀಯ ವಿಶ್ವವಿದ್ಯಾಲಯದ ಸುಮಾರು 40 ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ - ಪೋಲೆಂಡ್ ಗಡಿಯತ್ತ ಸಾಗುತ್ತಿದ್ದು, ಗಡಿಯಿಂದ 8 ಕಿಲೋ ಮೀಟರ್ ದೂರದಲ್ಲೇ ವಿದ್ಯಾರ್ಥಿಗಳನ್ನು ಡ್ರಾಪ್​ ಮಾಡಲಾಗಿದೆ. ಇವರೆಲ್ಲ ಇಂದು ಪೋಲೆಂಡ್​ ತಲುಪಲಿದ್ದು, ಅಲ್ಲಿಂದ ಹಂಗೇರಿ ರಾಜಧಾನಿ ಬುಡಾಪೆಸ್ಟ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ಮರಳಲಿದ್ದಾರೆ.

ಬಸ್​ನಲ್ಲಿ ಪ್ರಯಾಣ
ಬಸ್​ನಲ್ಲಿ ಪ್ರಯಾಣ
  • #WATCH The first batch of evacuees from Ukraine reach Romania via the Suceava border crossing. Our team at Suceava will now facilitate travel to Bucharest for their onward journey to India: MEA Spokesperson Arindam Bagchi

    (Source: Arindam Bagchi's Twitter handle) pic.twitter.com/c4uevDh68l

    — ANI (@ANI) February 25, 2022 " class="align-text-top noRightClick twitterSection" data=" ">

ಇಲ್ಲಿಂದ ಆಗಮಿಸುವ ಎಲ್ಲ ವಿದ್ಯಾರ್ಥಿಗಳ ಪ್ರಯಾಣ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಲಿದೆ. ಈ ಸಂಬಂಧ ಭಾರತೀಯ ರಾಯಭಾರ ಕಚೇರಿ, ಉಕ್ರೇನ್​, ಹಂಗೇರಿ, ಪೋಲೆಂಡ್​ ಹಾಗೂ ರೊಮೆನಿಯಾ ಸರ್ಕಾರಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ವ್ಯವಸ್ಥೆ ಮಾಡಿದೆ.

Last Updated : Feb 25, 2022, 10:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.