ಓಸ್ಲೋ( ನಾರ್ವೆ): ಭಾನುವಾರ ತಾಲಿಬಾನ್ ಪ್ರತಿನಿಧಿಗಳು ನಾರ್ವೆ ರಾಜಧಾನಿ ಓಸ್ಲೋಗೆ ಮೂರು ದಿನಗಳ ಭೇಟಿ ನೀಡಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಈ ಸಂದರ್ಭದಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಈ ಬಗ್ಗೆ ಮಾತನಾಡಿರುವ ನಾರ್ವೆ ಅಧಿಕಾರಿಗಳು, ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ. ಲಕ್ಷ ಲಕ್ಷ ಜನ ಆಹಾರ ಸಮಸ್ಯೆ ಎದುರಿಸುತ್ತಿದ್ದು, ಮಾನವ ಹಕ್ಕುಗಳು ಇಲ್ಲದಂತಾಗಿದೆ. ಅಂತಾರಾಷ್ಟ್ರೀಯ ಸಮುದಾಯ ಅಫ್ಘಾನಿಸ್ತಾನದಲ್ಲಿ ನಿರ್ಗತಿಕರ ನೆರವಿಗೆ ಬರಬೇಕಿದೆ. ಈ ಸಂಬಂಧ ಅಲ್ಲಿನ ಸರ್ಕಾರವೂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಾರ್ವೆ ಹೇಳಿದೆ.
ಇದನ್ನೂ ಓದಿ ಉತ್ಸವ ಮೂರ್ತಿಯಾಗಿರಲು ತಯಾರಿಲ್ಲ..ಅಧ್ಯಕ್ಷೀಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸರ್ಕಿಸಿಯನ್
ಅಷ್ಟೇ ಅಲ್ಲ ಅಫ್ಘಾನಿಸ್ತಾದನಲ್ಲಿ ಮಾನವ ಹಕ್ಕುಗಳ ರಕ್ಷಣೆ ಆಗಬೇಕು ಮತ್ತು ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಅವರ ಸಾಮುದಾಯಿಕ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬುದು ನಾರ್ವೆಯ ಆಶಯ ಆಗಿದೆ ಎಂದು ತಾಲಿಬಾನ್ ನಿಯೋಗಕ್ಕೆ ನಾರ್ವೆ ವಿದೇಶಾಂಗ ಸಚಿವ ಅನ್ನಿಕೆನ್ ಹ್ಯೂಟ್‌ಫೆಲ್ಡ್ ಹೇಳಿದ್ದಾರೆ.
ತಾಲಿಬಾನ್ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಕಿ ಅಫ್ಘಾನ್ ನಿಯೋಗದ ನೇತೃತ್ವ ವಹಿಸಿದ್ದು, ಇವರು ನಾರ್ವೆ ಹಾಗೂ ಅದರ ಮಿತ್ರ ರಾಷ್ಟ್ರಗಳ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ.
ತಾಲಿಬಾನ್ ನಿಯೋಗ ಮತ್ತು ಇತರ ಆಫ್ಘನ್ನರ ನಡುವಣ ಹಲವಾರು ವಿಭಾಗಗಳ ಸಭೆಗಳು ನಡೆಯಲಿವೆ. ಇವುಗಳಲ್ಲಿ ಮಹಿಳಾ ನಾಯಕಿಯರು, ಪತ್ರಕರ್ತರು ಮತ್ತು ಮಾನವ ಹಕ್ಕುಗಳ ರಕ್ಷಣೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುವ ವ್ಯಕ್ತಿಗಳೊಂದಿಗೆ ಮಹತ್ವದ ಮಾತುಕತೆ ನಡೆಯಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ