ETV Bharat / international

ಸ್ಪೇನ್​ನಲ್ಲಿ ಚಿಕಿತ್ಸೆಗೆ ಸ್ಥಳದ ಕೊರತೆ;  ಗ್ರಂಥಾಲಯವನ್ನೇ ICU ಆಗಿ ಪರಿವರ್ತಿಸಿದ ಆಸ್ಪತ್ರೆ - ಸ್ಪೇನ್​ನಲ್ಲಿ ಚಿಕಿತ್ಸೆಗೆ ಸ್ಥಳದ ಕೊರತೆ

ಸ್ಪೇನ್‌ನ ಕ್ಯಾಟಲೋನಿಯಾದ ಈಶಾನ್ಯ ಪ್ರದೇಶದ ಆಸ್ಪತ್ರೆಯು ತನ್ನ ಗ್ರಂಥಾಲಯವನ್ನು ತೀವ್ರ ನಿಗಾ ಘಟಕವನ್ನಾಗಿ ಪರಿವರ್ತಿಸಿದೆ. ಅಲ್ಲದೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯ ಸಂಬಂದಿ ಚಿಕಿತ್ಸೆಗೆಂದು ನಿರ್ಮಿಸಲಾದ ಈ ಆಸ್ಪತ್ರೆಯ ಹೊಸ ಪ್ರದೇಶವನ್ನು ಕೂಡಾ ಉದ್ಘಾಟಿಸುವ ಮೊದಲೇ ಕೊರೊನಾ ಸೋಂಕಿತರಿಗೆ ICU ಆಗಿ ಪರಿವರ್ತಿಸಲಾಗಿದೆ.

ICU
ಸ್ಪೇನ್
author img

By

Published : Apr 2, 2020, 12:54 PM IST

ಬಡಲೋನಾ(ಸ್ಪೇನ್‌): ಸ್ಪೇನ್‌ನಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದರಿಂದ, ಕ್ಯಾಟಲೋನಿಯಾದ ಈಶಾನ್ಯ ಪ್ರದೇಶದ ಆಸ್ಪತ್ರೆಯು ತನ್ನ ಗ್ರಂಥಾಲಯವನ್ನು ತೀವ್ರ ನಿಗಾ ಘಟಕ(ICU)ವನ್ನಾಗಿ ಪರಿವರ್ತಿಸಿದೆ.

ಹೃದಯ ಸಂಬಂದಿ ಚಿಕಿತ್ಸೆಗೆಂದು ನಿರ್ಮಿಸಲಾದ ಈ ಆಸ್ಪತ್ರೆಯ ಹೊಚ್ಚಹೊಸ ಪ್ರದೇಶವನ್ನು ಸಹ ಉದ್ಘಾಟಿಸುವ ಮೊದಲೇ COVID-19 ICU ಆಗಿ ಪರಿವರ್ತಿಸಲಾಗಿದೆ.

ಬಾರ್ಸಿಲೋನಾದ ಟ್ರಯಾಸ್ ಐ ಪೂಜೋಲ್ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ ಸೂಕ್ತ ರಕ್ಷಣಾ ಸಾಧನಗಳಿಲ್ಲದೆ ಹೆಣಗಾಡುತ್ತಿದ್ದಾರೆ. ಕೇವಲ ಪ್ಲಾಸ್ಟಿಕ್ ಏಪ್ರನ್‌ಗಳ ಮೂಲಕ ರೋಗಿಗಳಿಕೆ ಚಿಕಿತ್ಸೆ ನೀಡುತ್ತಿದ್ದಾರೆ.

ಬುಧವಾರ ಒಂದೇ ದಿನ ಸ್ಪೇನ್​ನಲ್ಲಿ 864 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 9,053 ಕ್ಕೆ ತಲುಪಿದೆ ಎಂದು ಸ್ಪೇನ್​ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈವರೆಗೆ ಒಟ್ಟು 102,136 ಜನರಲ್ಲಿ ಕೊರೊನಾ ಪಾಸಿಟಿವ್​ ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.