ಸ್ಮಿರ್ನಾ (ಅಮೆರಿಕ): ಶನಿವಾರ ಸ್ಮಿರ್ನಾದಿಂದ ಟೇಕ್ ಆಫ್ ಆಗಿದ್ದ ಲಘು ವಿಮಾನವು ಟೆನ್ನೆಸ್ಸೀ ಬಳಿಯ ಸರೋವರದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಸ್ಮಿರ್ನಾ ವಿಮಾನ ನಿಲ್ದಾಣದಿಂದ ಪಾಮ್ ಬೀಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ 'ಸೆಸ್ನಾ C501' ಜೆಟ್ನಲ್ಲಿ ಏಳು ಜನರಿದ್ದರು. ಟೆನ್ನೆಸ್ಸೀಯ ಪರ್ಸಿ ಪ್ರೀಸ್ಟ್ ಸರೋವರಕ್ಕೆ ಜೆಟ್ ಅಪ್ಪಳಿಸಿದೆ ಎಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕಂಬಿ ಹಿಂದೆ ವಜ್ರೋದ್ಯಮಿ.. ಗಾಯಗೊಂಡ ಮೆಹುಲ್ ಚೋಕ್ಸಿ ಫೋಟೋಗಳನ್ನು ನೋಡಿ
ನಿನ್ನೆಯಿಂದ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ ಯಾರೊಬ್ಬರನ್ನೂ ರಕ್ಷಿಸಲಾಗಿಲ್ಲ. ಸರೋವರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಕುಟುಂಬಸ್ಥರು ಖಚಿತಪಡಿಸುವವರೆಗೆ ಮೃತರ ಬಗ್ಗೆ ಮಾಹಿತಿ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.