ETV Bharat / international

ಬ್ರಿಟನ್​ನಲ್ಲಿ ಗುಂಡಿನ ದಾಳಿ: ಮಗು ಸೇರಿ ಆರು ಮಂದಿ ದುರ್ಮರಣ, ಹಲವರಿಗೆ ಗಾಯ

ಬ್ರಿಟನ್‌ ಸಂಸದ ಲ್ಯೂಕ್ ಪೊಲ್ಲಾರ್ಡ್​ ಘಟನೆ ಕುರಿತು ಟ್ವೀಟ್ ಮಾಡಿದ್ದು, ಇಂದು ನಮ್ಮ ನಗರಕ್ಕೆ ಅತ್ಯಂತ ಕರಾಳ ದಿನ. ಸಂತ್ರಸ್ತರ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.

Several killed in shooting in UK's Plymouth
ಬ್ರಿಟನ್​ನಲ್ಲಿ ಗುಂಡಿನ ದಾಳಿ: ಆರು ಮಂದಿ ದುರ್ಮರಣ
author img

By

Published : Aug 13, 2021, 9:51 AM IST

ಲಂಡನ್(ಬ್ರಿಟನ್): ನೈರುತ್ಯ ಇಂಗ್ಲೆಂಡ್‌ನ ಡೆವೊನ್‌ ಕೌಂಟಿಯ ಬಂದರು ನಗರವಾದ ಪ್ಲೈಮೌತ್‌ನಲ್ಲಿ ಗುರುವಾರ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ಹಲವರು ಸಾವನ್ನಪ್ಪಿದ್ದಾರೆ.

ಸಂಜೆ 6.10ರ ಸುಮಾರಿಗೆ ಪ್ಲೈಮೌತ್‌ನ ಕೀಹ್ಯಾಮ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್​ ವರದಿ ಮಾಡಿದೆ. ಘಟನೆಯಲ್ಲಿ ಸಾವಿಗೀಡಾದವರ ಪೈಕಿ ಒಂದು ಮಗು ಕೂಡಾ ಸೇರಿದೆ.

ಬ್ರಿಟನ್​ ಗೃಹ ಇಲಾಖೆಯ ಕಾರ್ಯದರ್ಶಿ ಮತ್ತು ಅನಿವಾಸಿ ಭಾರತೀಯರಾದ ಪ್ರೀತಿ ಪಟೇಲ್ ಟ್ವೀಟ್ ಮಾಡಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲಿನ ಸಂಸದರಾದ ಲ್ಯೂಕ್ ಪೊಲ್ಲಾರ್ಡ್​ ಈ ಕುರಿತು ಟ್ವೀಟ್ ಮಾಡಿದ್ದು, ಇಂದು ನಮ್ಮ ನಗರಕ್ಕೆ ಅತ್ಯಂತ ಕರಾಳ ದಿನ ಎಂದಿದ್ದಾರೆ. ಜೊತೆಗೆ ಸಂತ್ರಸ್ತರ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.

ಸಾವನ್ನಪ್ಪಿದವರಲ್ಲಿ ಗುಂಡಿನ ದಾಳಿ ನಡೆಸಿದ್ದ ಓರ್ವ ವ್ಯಕ್ತಿಯೂ ಇದ್ದಾನೆಂಬ ಮಾಹಿತಿ ದೊರಕಿದ್ದು, ಯಾರು, ಯಾವ ಕಾರಣಕ್ಕಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಮೂರನೇ ಒಂದು ಭಾಗವೀಗ ತಾಲಿಬಾನ್ ವಶ: ಯುದ್ಧಪೀಡಿತ ದೇಶದ ಸಂಪೂರ್ಣ ಚಿತ್ರಣ ಇಲ್ಲಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.