ಮಿಲಾನ್ (ಇಟಲಿ): ಇಟಲಿಯ ದೇಶೀಯ ಫುಟ್ಬಾಲ್ ಸ್ಪರ್ಧೆಯ ಸರಣಿ ಎ ಯಲ್ಲಿ ಆಡುವ ಆಟಗಾರರಿಗೆ ಮೇ 4 ರಿಂದ ವೈಯಕ್ತಿಕ ತರಬೇತಿಯನ್ನು ಪುನರಾರಂಭಿಸಲು ಅವಕಾಶ ನೀಡಲಾಗುವುದು ಎಂದು ಇಟಾಲಿಯನ್ ಸರ್ಕಾರ ಖಚಿತಪಡಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅತೀ ಹೆಚ್ಚು ಹಾನಿಗೊಳಗಾದ ದೇಶಗಳ ಸಾಲಿನಲ್ಲಿರುವ ಇಟಾಲಿ ಇನ್ನೂ ಚೇತರಿಸಿಕೊಂಡಿಲ್ಲ. ಈ ಹಿನ್ನೆಲೆ ಮಾರ್ಚ್ 18ರಿಂದ ಶುರುವಾಗಬೇಕಿದ್ದ ಫುಟ್ಬಾಲ್ ಸರಣಿ ಎ ಗುಂಪು ತರಬೇತಿಯನ್ನು ಅಮಾನತುಗೊಳಿಸಲಾಗಿದೆ. ಆದಾಗ್ಯೂ, ನಿರ್ಬಂಧಿತ ಕ್ರಮಗಳನ್ನು ನಿಧಾನವಾಗಿ ಸಡಿಲಿಸಲು ಯೋಚಿಸುತ್ತಿದ್ದೇನೆ ಎಂದು ಇಟಲಿಯ ಪ್ರಧಾನಿ ಗೈಸೆಪೆ ಕಾಂಟೆ ಹೇಳಿದ್ದಾರೆ.
ವೈಯಕ್ತಿಕ ತರಬೇತಿಯ ಆರಂಭಿಕ ಹಂತವು ಎರಡು ವಾರಗಳವರೆಗೆ ಇರಲಿದೆ ಹಾಗೂ ಗುಂಪು ತರಬೇತಿ ಅವಧಿಗಳು ಮೇ 18 ರಿಂದ ಪ್ರಾರಂಭವಾಗಲಿವೆ ಎಂದು ಕಾಂಟೆ ತಿಳಿಸಿದ್ದಾರೆ.
ಮತ್ತೊಂದೆಡೆ, ಇಟಲಿಯ ಕ್ರೀಡಾ ಸಚಿವ ವಿನ್ಸೆಂಜೊ ಸ್ಪಡಾಫೊರಾ ಅವರು ನಿರ್ಬಂಧಗಳನ್ನು ಸರಾಗಗೊಳಿಸುವಿಕೆಯು ಅಂತಿಮವಾಗಿ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಗೌರವಿಸುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.