ಕೀವ್(ಉಕ್ರೇನ್): ಕಳೆದ ಏಳು ದಿನಗಳಿಂದ ರಷ್ಯಾ-ಉಕ್ರೇನ್ ಮಧ್ಯೆ ತೀವ್ರ ಸ್ವರೂಪದ ಯುದ್ಧ ನಡೆಯುತ್ತಿದೆ. ಖಾರ್ಕಿವ್ನಲ್ಲಿ ನಿನ್ನೆ ರಷ್ಯಾ ಮಿಲಿಟರಿ ಪಡೆ ನಡೆಸಿರುವ ಭೀಕರ ಶೆಲ್ ದಾಳಿಯಿಂದಾಗಿ ಕರ್ನಾಟಕದ ಹಾವೇರಿಯ ನವೀನ್(21) ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇಂದು ಭಾರತದ ಮತ್ತೋರ್ವ ವಿದ್ಯಾರ್ಥಿ ಬ್ರೈನ್ ಸ್ಟ್ರೋಕ್ನಿಂದಾಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಉಕ್ರೇನ್ನ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡ್ತಿದ್ದ ಚಂದನ್ ಜಿಂದಾಲ್(22) ಸಾವನ್ನಪ್ಪಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಚಂದನ್, ಬ್ರೈನ್ ಸ್ಟ್ರೋಕ್ನಿಂದ ಬಳುಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಚಂದನ್ ಮೃತದೇಹವನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಈಗಾಗಲೇ ಉಕ್ರೇನ್ ರಾಯಭಾರ ಕಚೇರಿಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: 3ನೇ ಮಹಾಯುದ್ಧ ಅಣ್ವಸ್ತ್ರಗಳಿಂದ ನಡೆಯಲಿದ್ದು ಅತ್ಯಂತ ವಿನಾಶಕಾರಿ: ರಷ್ಯಾ ವಿದೇಶಾಂಗ ಸಚಿವ
ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೋಸ್ಕರ ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಮಿಷನ್ ಹಮ್ಮಿಕೊಂಡಿದ್ದು, ಈಗಾಗಲೇ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತಂದಿದೆ.
-
Embassy of India in Ukraine issues an urgent advisory to Indian nationals in Kharkiv
— ANI (@ANI) March 2, 2022 " class="align-text-top noRightClick twitterSection" data="
Must leave Kharkiv immediately, proceed to Pisochyn, Bezlyudovka & Babaye as soon as possible. They must reach these settlements by 1800 hrs (Ukrainian time) today, it reads pic.twitter.com/ko4JGcPfmY
">Embassy of India in Ukraine issues an urgent advisory to Indian nationals in Kharkiv
— ANI (@ANI) March 2, 2022
Must leave Kharkiv immediately, proceed to Pisochyn, Bezlyudovka & Babaye as soon as possible. They must reach these settlements by 1800 hrs (Ukrainian time) today, it reads pic.twitter.com/ko4JGcPfmYEmbassy of India in Ukraine issues an urgent advisory to Indian nationals in Kharkiv
— ANI (@ANI) March 2, 2022
Must leave Kharkiv immediately, proceed to Pisochyn, Bezlyudovka & Babaye as soon as possible. They must reach these settlements by 1800 hrs (Ukrainian time) today, it reads pic.twitter.com/ko4JGcPfmY
ತಕ್ಷಣವೇ ಖಾರ್ಕಿವ್ ತೊರೆಯಿರಿ: ಉಕ್ರೇನ್ನ ಖಾರ್ಕಿವ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಚುರುಕುಗೊಳಿಸಿದ್ದು ಕೇಂದ್ರ ಸರ್ಕಾರ ಅಲ್ಲಿರುವ ಭಾರತೀಯ ಪ್ರಜೆಗಳಿಗೆ ಮಹತ್ವದ ತುರ್ತು ಸೂಚನೆ ನೀಡಿದ್ದು, ತಕ್ಷಣವೇ ಖಾರ್ಕಿವ್ ತೊರೆಯುವಂತೆ ತಿಳಿಸಿದೆ.