ETV Bharat / international

ರಷ್ಯಾದಲ್ಲೂ ಕೊರೊನಾ ಅಬ್ಬರ... ಒಂದೇ ದಿನ 2,558 ಹೊಸ ಕೇಸ್​ ಪತ್ತೆ! - ಮಾಸ್ಕೋ ಕೊರೊನಾ

ವಿಶ್ವದಾದ್ಯಂತ ರಣಕೇಕೆ ಹಾಕುತ್ತಿರುವ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚು ಜನರಲ್ಲಿ ಹಬ್ಬುತ್ತಿದ್ದು, ರಷ್ಯಾದಲ್ಲೂ ಇದೀಗ ಇದರ ಅಬ್ಬರ ಜೋರಾಗುತ್ತಿದೆ.

Russia's Coronavirus Cases Rise By 2,558

author img

By

Published : Apr 13, 2020, 5:15 PM IST

ಮಾಸ್ಕೋ: ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೊರೊನಾ ಮಾಹಾಮಾರಿ ದಿನದಿಂದ ದಿನಕ್ಕೆ ರಣಕೇಕೆ ಹಾಕ್ತಿದ್ದು, ಹೆಚ್ಚು ಹೆಚ್ಚು ಜನರಲ್ಲಿ ಈ ವೈರಸ್​ ಹಬ್ಬಲು ಶುರುಗೊಂಡಿದೆ.

ಇದೀಗ ರಷ್ಯಾದಲ್ಲೂ ಒಂದೇ ದಿನ ದಾಖಲೆಯ 2,558 ಹೊಸ ಪ್ರಕರಣ ಕಂಡು ಬಂದಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 18,328 ಆಗಿದೆ ಎಂದು ಅಲ್ಲಿನ ಸರ್ಕಾರಿ ಕಚೇರಿ ಮಾಹಿತಿ ನೀಡಿದೆ. 1,291 ಜನರು ಈ ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಳಿದಂತೆ ವೈರಸ್​​ನಿಂದ ಬಳಲುತ್ತಿದ್ದ 148 ಜನರು ಈಗಾಗಲೇ ಸಾವನ್ನಪ್ಪಿದ್ದಾರೆ.

ವಿಶ್ವದಾದ್ಯಂತ 1.8 ಮಿಲಿಯನ್​ ಜನರು ಈ ಮಹಾಮಾರಿಗೆ ಒಳಗಾಗಿದ್ದು, ಅಮೆರಿಕದಲ್ಲಿ ಅತಿ ಹೆಚ್ಚು 5,56,044 ಜನರು ಈ ಸೋಂಕಿನಿಂದ ಬಳಲುತ್ತಿದ್ದು, 42 ಸಾವಿರ ಜನರು ಸೋಂಕಿನಿಂದ ಗುಣಮುಖರಾಗಿದ್ದು, 22 ಸಾವಿರ ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ಸ್ಪೇನ್​​ನಲ್ಲಿ 1,66,831 ಜನರು, ಇಟಲಿ 1,56,363 ಮಂದಿ, ಫ್ರಾನ್ಸ್​​ನಲ್ಲಿ 1,33,670, ಜರ್ಮನಿಯಲ್ಲಿ 1,27,854 ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.