ಕೀವ್(ಉಕ್ರೇನ್): ಕಳೆದ ಆರು ದಿನಗಳಿಂದ ಉಕ್ರೇನ್ನ ವಿವಿಧ ನಗರಗಳ ಮೇಲೆ ರಷ್ಯಾ ಮಿಲಿಟರಿ ವೈಮಾನಿಕ ಶೆಲ್ ಹಾಗೂ ಕ್ಷಿಪಣಿ ದಾಳಿ ನಡೆಸುತ್ತಿದೆ. ಪರಿಣಾಮ ಅನೇಕ ಪ್ರಮುಖ ಕಟ್ಟಡಗಳು ನೆಲಸಮವಾಗುತ್ತಿವೆ.
ಇಂದು ಬೆಳಗ್ಗೆ ಕೂಡ ಪ್ರಮುಖ ನಗರ ಖಾರ್ಕಿವ್ನಲ್ಲಿರುವ ಪ್ರಾದೇಶಿಕ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು ಕಟ್ಟಡ ಕ್ಷಣಾರ್ಧದಲ್ಲಿ ಸಂಪೂರ್ಣ ಧ್ವಂಸಗೊಂಡಿದೆ.
ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಕ್ಷಿಪಣಿ ದಾಳಿಯಿಂದಾಗಿ ಎಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿಲ್ಲ.
ಉಕ್ರೇನ್ನ ಈಶಾನ್ಯದಲ್ಲಿರುವ ಸಮಿ ಪ್ರದೇಶದಲ್ಲಿ ನಡೆದ ಶೆಲ್ ದಾಳಿಯಲ್ಲಿ 70ಕ್ಕೂ ಅಧಿಕ ಉಕ್ರೇನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಯುದ್ಧಪೀಡಿತ ಉಕ್ರೇನ್ ಮತ್ತು ರಷ್ಯಾ ನಡುವೆ ನಿನ್ನೆ ಬೆಲಾರಸ್ನಲ್ಲಿ ಶಾಂತಿ ಮಾತುಕತೆ ನಡೆದಿದ್ದು ವಿಫಲವಾಗಿದ್ದು ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ.