ಕೀವ್(ಉಕ್ರೇನ್): ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ಪಡೆಯಲು ರಷ್ಯಾ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ರಷ್ಯಾ ದಾಳಿ ಇಂದಿಗೆ 29ನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ತೀವ್ರಗೊಂಡಿದೆ. ಈ ನಡುವೆ ಕೀವ್ನಲ್ಲಿ ನಡೆದ ಶೆಲ್ ದಾಳಿಗೆ ರಷ್ಯಾದ ಪತ್ರಕರ್ತೆ ಮೃತಪಟ್ಟಿದ್ದಾರೆ. ರಷ್ಯಾ ಸ್ವತಂತ್ರ ನ್ಯೂಸ್ ಔಟ್ಲೆಟ್ವೊಂದರ ಪತ್ರಕರ್ತರಾಗಿದ್ದ ಓಕ್ಸಾನಾ ಬೌಲಿನಾ ಘಟನೆಯಲ್ಲಿ ಅಸುನೀಗಿದ ಪತ್ರಕರ್ತರಾಗಿದ್ದಾರೆ.
ಪತ್ರಕರ್ತ ಅಷ್ಟೇ ಅಲ್ಲ ಈ ದಾಳಿ ವೇಳೆ ಒಬ್ಬ ನಾಗರಿಕ ಕೂಡ ಸಾವನ್ನಪ್ಪಿದ್ದಾನೆ. ಇನ್ನು ಪತ್ರಕರ್ತೆ ಬೌಲಿನಾ ಜೊತೆಗಿದ್ದ ಇನ್ನಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಬೌಲಿನಾ ಅವರು ಈ ಹಿಂದೆ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರ ಭ್ರಷ್ಟಾಚಾರ - ವಿರೋಧಿ ಫೌಂಡೇಷನ್‌ಗಾಗಿ ಕೆಲಸ ಮಾಡಿದ್ದರು ಎಂದು ಇನ್ಸೈಡರ್ ಹೇಳಿದೆ. ಬೌಲಿನಾ ಭ್ರಷ್ಟಾಚಾರ ವಿರೋಧಿ ಫೌಂಡೇಷನ್ಗೆ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ರಷ್ಯಾ ತೊರೆಯುವಂತೆ ಸೂಚಿಸಲಾಗಿತ್ತು.
ಇನ್ನು ಉಕ್ರೇನ್- ರಷ್ಯಾ ಯುದ್ಧ ಆರಂಭವಾದ ಬಳಿಕ ಬೌಲಿನಾ ಉಕ್ರೇನ್ನಲ್ಲಿದ್ದು, ಯುದ್ಧ ಭೂಮಿಯ ವರದಿಗಾರಿಕೆ ಮಾಡುತ್ತಿದ್ದರು. ಅಷ್ಟೇ ಅಲ್ಲ ರಷ್ಯಾ ನಡೆಸುತ್ತಿದ್ದ ಯುದ್ಧಾಪರಾದದ ವರದಿಗಳನ್ನು ಮಾಡುತ್ತಿದ್ದರು. ಹೀಗೆ ತಮ್ಮ ಸೇವೆಯಲ್ಲಿ ನಿರತರಾಗಿದ್ದ ಪತ್ರಕರ್ತೆ ಈಗ ಶೆಲ್ ದಾಳಿಗೆ ಬಲಿಯಾಗಿದ್ದಾರೆ.
ಇದನ್ನು ಓದಿ:ಪಾಕ್ ಪಿಎಂ ಇಮ್ರಾನ್ ಖಾನ್ ಆಶ್ಚರ್ಯಕರ ವಿಷಯ ಬಹಿರಂಗಗೊಳಿಸಬಹುದು: ಸಚಿವ ಶೇಖ್ ರಶೀದ್!