ಕೀವ್(ಉಕ್ರೇನ್): ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ತಾರಕ್ಕೇರಿದ್ದು, ಈಗಾಗಲೇ ನೂರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಉಕ್ರೇನ್ ರಕ್ಷಣೆಗಾಗಿ ಸ್ವಯಂಪ್ರೇರಿತರಾಗಿ ಸಾವಿರಾರು ಜನರು ಕೈಯಲ್ಲಿ ಗನ್ ಹಿಡಿದು, ರಷ್ಯಾ ಮಿಲಿಟರಿ ದಾಳಿ ಎದುರಿಸುತ್ತಿದ್ದಾರೆ. ಇದೀಗ ಬಾಕ್ಸಿಂಗ್ ಮಾಜಿ ವಿಶ್ವ ಚಾಂಪಿಯನ್ ವಿಟಾಲಿ ಕ್ಲಿಟ್ಸ್ಕೊ ಹಾಗೂ ಆತನ ಸಹೋದರ ಒಲಿಂಪಿಕ್ ಚಿನ್ನದ ಪದಕ ವಿಜೇತ ವ್ಲಾಡಿಮಿರ್ ಕ್ಲಿಟ್ಸ್ಕೊ ಮಿಲಿಟರಿ ಪಡೆ ಸೇರಿದ್ದಾರೆ.
![former boxing champion Vitali Klitschko](https://etvbharatimages.akamaized.net/etvbharat/prod-images/14576821_war.jpg)
ರಷ್ಯಾ ಮಿಲಿಟರಿ ದಾಳಿಯಿಂದ ತನ್ನ ದೇಶ ರಕ್ಷಣೆ ಮಾಡುವ ಉದ್ದೇಶದಿಂದ ಇಬ್ಬರು ಸಹೋದರರು ಇದೀಗ ಯುದ್ಧಭೂಮಿಗೆ ತೆರಳಿದ್ದು, ದೇಶದ ರಕ್ಷಣೆಗಾಗಿ ಮೆಷಿನ್ ಗನ್ ಲೋಡ್ ಮಾಡುತ್ತಿದ್ದಾರೆ. ಇದರ ಕೆಲವೊಂದು ಫೋಟೋ ಇದೀಗ ವೈರಲ್ ಆಗಿವೆ. ಉಕ್ರೇನ್ ಮಿಲಿಟರಿ ಪಡೆಯೊಂದಿಗೆ ಕೈ ಜೋಡಿಸಿರುವ ಇಬ್ಬರು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.
![former boxing champion Vitali Klitschko](https://etvbharatimages.akamaized.net/etvbharat/prod-images/14576821_as.jpg)
ಇದನ್ನೂ ಓದಿರಿ: ರಷ್ಯಾ - ಉಕ್ರೇನ್ ಸಂಘರ್ಷ: ಉಕ್ರೇನ್ನಲ್ಲಿ 198 ನಾಗರಿಕರು ಸಾವು, ಸಾವಿರಕ್ಕೂ ಅಧಿಕ ಜನರಿಗೆ ಗಾಯ
-
Vitali Klitschko taking part in military drills in March 2021, preparing to defend Ukraine from Russia well in advance of Vladimir Putin’s current invasion… pic.twitter.com/XdiZ6G4Tu2
— Michael Benson (@MichaelBensonn) February 25, 2022 " class="align-text-top noRightClick twitterSection" data="
">Vitali Klitschko taking part in military drills in March 2021, preparing to defend Ukraine from Russia well in advance of Vladimir Putin’s current invasion… pic.twitter.com/XdiZ6G4Tu2
— Michael Benson (@MichaelBensonn) February 25, 2022Vitali Klitschko taking part in military drills in March 2021, preparing to defend Ukraine from Russia well in advance of Vladimir Putin’s current invasion… pic.twitter.com/XdiZ6G4Tu2
— Michael Benson (@MichaelBensonn) February 25, 2022
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿಟಾಲಿ ಕ್ಲಿಟ್ಸ್ಕೊ ರಷ್ಯಾದ ಮಿಲಿಟರಿ ಆಕ್ರಮಣದಿಂದ ನನ್ನ ದೇಶವನ್ನ ರಕ್ಷಣೆ ಮಾಡಲು ನಾನು ಹೋರಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇವರೊಂದಿಗೆ ಒಲಿಂಪಿಕ್ ಚಿನ್ನದ ವಿಜೇತ ವ್ಲಾಡಿಮಿರ್ ಕ್ಲಿಟ್ಸ್ಕೊ ಸಹ ಇದ್ದು, ಶಸ್ತ್ರಾಸ್ತ್ರ ಜೋಡಣೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಉಕ್ರೇನ್-ರಷ್ಯಾ ನಡುವಿನ ಸಂಘರ್ಷ ಮುಂದುವರೆದಿದ್ದು, ಇಲ್ಲಿಯವರೆಗೆ ಉಭಯ ದೇಶದ ಅನೇಕ ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.