ಕೀವ್(ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಏಳನೇ ದಿನವೂ ಮುಂದುವರೆದಿದೆ. ರಷ್ಯಾದ ದಾಳಿಯ ತೀವ್ರತೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಈಗಾಗಲೇ ಪ್ರಮುಖ ನಗರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈವರೆಗೆ ಸುಮಾರು 2 ಸಾವಿರ ಮಂದಿ ಉಕ್ರೇನ್ ನಾಗರಿಕರು ರಷ್ಯಾದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸರ್ಕಾರ ಹೇಳಿಕೊಂಡಿದೆ.
ಉಕ್ರೇನ್ನಾದ್ಯಂತ ಸುಮಾರು 416 ಸ್ಫೋಟಕಗಳನ್ನು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರು ನಿಷ್ಕ್ರಿಯಗೊಳಿಸಿದ್ದಾರೆ. ವಸತಿ ಕಟ್ಟಡಗಳು, ಆಸ್ಪತ್ರೆಗಳು, ಶಾಲೆಗಳನ್ನು ರಷ್ಯಾ ಗುರಿಯಾಗಿಸಿದೆ ಎಂದು ಉಕ್ರೇನ್‌ನ ಎಮರ್ಜೆನ್ಸೀಸ್ ಸರ್ವೀಸ್ ಮಾಹಿತಿ ನೀಡಿದೆ.
-
#Видео Работа Армейской авиации ВКС России в ходе спецоперации pic.twitter.com/qyBsnial4M
— Минобороны России (@mod_russia) March 1, 2022 " class="align-text-top noRightClick twitterSection" data="
">#Видео Работа Армейской авиации ВКС России в ходе спецоперации pic.twitter.com/qyBsnial4M
— Минобороны России (@mod_russia) March 1, 2022#Видео Работа Армейской авиации ВКС России в ходе спецоперации pic.twitter.com/qyBsnial4M
— Минобороны России (@mod_russia) March 1, 2022
ಉಕ್ರೇನ್ನಾದ್ಯಂತ ದಾಳಿ ಮುಂದುವರೆಸಲಾಗಿದ್ದು, ರಷ್ಯಾ ರಕ್ಷಣಾ ಇಲಾಖೆ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ರಷ್ಯಾದ ವಾಯುಪಡೆಗಳ ಕಾರ್ಯಾಚರಣೆಯ ವಿಡಿಯೋ ಇದಾಗಿದ್ದು, ದಾಳಿಯ ತೀವ್ರತೆಯನ್ನು ವಿಡಿಯೋ ಬಿಚ್ಚಿಡುತ್ತದೆ.
ದಕ್ಷಿಣ ಉಕ್ರೇನ್‌ನ ಡ್ನೀಪರ್ ನದಿಯ ಜಪೋರಿಝಿಯಾ ನಗರದ ಸಮೀಪವಿರುವ ಉಕ್ರೇನ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಸುತ್ತಲಿನ ಪ್ರದೇಶವನ್ನು ರಷ್ಯಾ ನಿಯಂತ್ರಣಕ್ಕೆ ಪಡೆದಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ನೋಡಿ: ರಷ್ಯಾದ ಭೀಕರ ದಾಳಿಗೆ ಉಕ್ರೇನ್ ತತ್ತರ, ಕೀವ್‌ನಲ್ಲಿ ವಾಣಿಜ್ಯ ಕಟ್ಟಡಗಳು ಧ್ವಂಸ
ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ಟಾಸ್ ಪ್ರಕಾರ, ರಷ್ಯಾ ಮತ್ತು ಉಕ್ರೇನ್ ನಡುವೆ ಬುಧವಾರ ಸಂಜೆ ಶಾಂತಿ ಮಾತುಕತೆ ಪುನಾರಂಭವಾಗಲಿದೆ. ರಷ್ಯಾ ಮಾತುಕತೆಗಳನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾಹಿತಿ ನೀಡಿದ್ದಾರೆ.