ಮಾಸ್ಕೋ(ರಷ್ಯಾ): ಕಪ್ಪು ಸಮುದ್ರದಲ್ಲಿ ಯಾವುದಾದರೂ ಪ್ರಚೋದನಾತ್ಮಕ ತಂತ್ರಗಳನ್ನು ಅನುಸರಿಸಿದರೆ ತಮ್ಮ ನೌಕೆಪಡೆಯ ಹಡಗುಗಳ ಮೇಲೆ ಬಾಂಬ್ ದಾಳಿ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ರಷ್ಯಾ ಬ್ರಿಟನ್ಗೆ ಎಚ್ಚರಿಕೆ ನೀಡಿದೆ.
ರಷ್ಯಾ ಆಕ್ರಮಿತ ಕ್ರಿಮಿಯಾದ ಕರಾವಳಿ ಪ್ರದೇಶದಲ್ಲಿ ಬ್ರಿಟನ್ ಪ್ರಚೋದನಾತ್ಮಕ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಇದೇ ಕಾರಣದಿಂದ ಮಾಸ್ಕೋದಲ್ಲಿನ ಬ್ರಿಟಿಷ್ ರಾಯಭಾರಿಗೆ ಸಮನ್ಸ್ ನೀಡಿ, ರಾಜತಾಂತ್ರಿಕವಾಗಿ ಚರ್ಚೆ ನಡೆಸಿದೆ.
ಕ್ರಿಮಿಯಾದ ಕರಾವಳಿ ತೀರ ನಮ್ಮದು ಎಂದು ರಷ್ಯಾ ವಾದಿಸುತ್ತಿದ್ದು, ಬ್ರಿಟನ್ ಮತ್ತು ಹಲವು ರಾಷ್ಟ್ರಗಳ ಅದು ಉಕ್ರೇನ್ಗೆ ಸೇರಿದ್ದು ಎಂದು ಮತ್ತೊಂದು ವಾದವನ್ನು ಜಗತ್ತಿನ ಮುಂದಿಡುತ್ತಿವೆ. ಈ ಘಟನೆಯ ಬಗ್ಗೆ ರಷ್ಯಾ ತಪ್ಪಾದ ವಿವರ ನೀಡುತ್ತಿದೆ ಎಂದು ಬ್ರಿಟನ್ ಹೇಳಿದೆ. ನೌಕಾಪಡೆಯ ಡಿಫೆಂಡರ್ ನೌಕೆಯ ಮೂಲಕ ಇಂಗ್ಲೆಂಡ್ ಯಾವುದೇ ಪ್ರಚೋದನಾತ್ಮಕ ತಂತ್ರಗಳನ್ನು ಅನುಸರಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದನ್ನು ಓದಿ: ಕೆನಡಾದ ವಸತಿ ಶಾಲೆ ಆವರಣದಲ್ಲಿ 600 ಮಕ್ಕಳ ಮೃತದೇಹ ಪತ್ತೆ; ಇದು ಸಾಂಸ್ಕೃತಿಕ ಹತ್ಯಾಕಾಂಡದ ಭೀಕರತೆ
ಕಪ್ಪು ಸಮುದ್ರದಲ್ಲಿ ಅಧಿಪತ್ಯ ಸ್ಥಾಪಿಸಲು ರಷ್ಯಾ ಸೇರಿದಂತೆ ಹಲವು ಟರ್ಕಿ, ಫ್ರಾನ್ಸ್, ಬ್ರಿಟನ್, ಅಮೆರಿಕ ರಾಷ್ಟ್ರಗಳು ಸುಮಾರು ಒಂದು ಶತಮಾನದಿಂದ ಪ್ರಯತ್ನಿಸಿದ್ದು, ಈ ರೀತಿಯ ಘಟನೆಗಳು ಆಗಾಗ ಸಂಭವಿಸುತ್ತಿರುತ್ತವೆ.