ETV Bharat / international

ಉಕ್ರೇನ್‌ನ ಕೀವ್ ಸೇರಿ ಹಲವು ನಗರಗಳ ಮೇಲೆ ವಾಯುದಾಳಿ ಎಚ್ಚರಿಕೆ

ಉಕ್ರೇನ್​ನ ರಾಜಧಾನಿ ಕೀವ್ ಮತ್ತು ಮೈಕೊಲೈವ್, ಎಲ್ವಿವ್, ಝೈಟೊಮಿರ್, ಇವಾನೊ-ಫ್ರಾಂಕಿವ್ಸ್ಕ್ ಹಾಗು ಚೆರ್ನಿಹಿವ್ ನಗರಗಳ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸುವ ಸೂಚನೆ ಸಿಕ್ಕಿದೆ ಎಂದು ದಿ ಕೀವ್​ ಇಂಡಿಪೆಂಡೆಂಟ್ ಟ್ವೀಟ್ ಮಾಡಿದೆ.

Russia-Ukraine tensions: Capital city Kyiv wakes with air raid alerts
ಉಕ್ರೇನ್- ರಷ್ಯಾ ಯುದ್ಧ: ಕೀವ್, ಇತರ ನಗರಗಳ ಮೇಲೆ ವಾಯುದಾಳಿ ಎಚ್ಚರಿಕೆ
author img

By

Published : Mar 3, 2022, 2:52 PM IST

ಕೀವ್(ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ಯುದ್ಧ 8ನೇ ದಿನಕ್ಕೆ ಕಾಲಿಟ್ಟಿದೆ. ದಾಳಿ ತೀವ್ರಗೊಳ್ಳುತ್ತಿದೆ. ಉಕ್ರೇನ್​ರಾಜಧಾನಿ ಕೀವ್ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸುವ ಸೂಚನೆ ಸಿಕ್ಕಿದ ಬೆನ್ನಲ್ಲೇ ಅಲ್ಲಿನ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಲಾಗಿದೆ.

'ಕೀವ್​ನಲ್ಲಿ ವಾಯುದಾಳಿ ಎಚ್ಚರಿಕೆ. ನಿವಾಸಿಗಳು ಹತ್ತಿರದ ಸುರಕ್ಷಿತ ಆಶ್ರಯಗಳಿಗೆ ತೆರಳಬೇಕು' ಎಂದು ದಿ ಕೀವ್​ ಇಂಡಿಪೆಂಡೆಂಟ್ ಟ್ವೀಟ್ ಮಾಡಿದೆ. ಕೀವ್ ಮಾತ್ರವಲ್ಲದೆ ಮೈಕೊಲೈವ್, ಎಲ್ವಿವ್, ಝೈಟೊಮಿರ್, ಇವಾನೊ-ಫ್ರಾಂಕಿವ್ಸ್ಕ್, ಚೆರ್ನಿಹಿವ್ ಮುಂತಾದ ನಗರಗಳಲ್ಲಿ ದಾಳಿ ನಡೆಯಬಹುದೆಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಕೀವ್, ಮೈಕೊಲೈವ್, ಎಲ್ವಿವ್, ಝೈಟೊಮಿರ್, ಇವಾನೊ-ಫ್ರಾಂಕಿವ್ಸ್ಕ್, ಚೆರ್ನಿಹಿವ್ ಮತ್ತು ಚೆರ್ನಿಹಿವ್ ಒಬ್ಲಾಸ್ಟ್, ವೊಲಿನ್ ಒಬ್ಲಾಸ್ಟ್, ಚೆರ್ಕಾಸಿ ಒಬ್ಲಾಸ್ಟ್, ಕಿರೊವೊಹ್ರಾಡ್ ಒಬ್ಲಾಸ್ಟ್, ಪೋಲ್ಟವಾ ಒಬ್ಲಾಸ್ಟ್, ಒಬ್ಲಾಝ್ಝೆಸ್ಟ್, ಕ್ಮೆಲ್ನಿಟ್ಸ್ಕಿ ನಗರಗಳಲ್ಲಿ ರಷ್ಯಾ ವೈಮಾನಿಕ ದಾಳಿ ನಡೆಸಬಹುದೆಂದು ಮುಂಚಿತವಾಗಿ ತಿಳಿಸಲಾಗಿದೆ.

  • ⚡️Air raid alerts in Kyiv.

    Residents are asked to go to the nearest shelter.

    — The Kyiv Independent (@KyivIndependent) March 3, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ ಸೇನೆ: ಹೋರಾಟ ಮುಂದುವರೆದಿದೆ ಎಂದ ಉಕ್ರೇನ್​ ಅಧ್ಯಕ್ಷ!

ಈ ಮಧ್ಯೆ ಉಕ್ರೇನ್‌ನ ಈಶಾನ್ಯ ನಗರ ಸುಮಿಯಲ್ಲಿರುವ ಸುಮಿ ಸ್ಟೇಟ್ ಯೂನಿವರ್ಸಿಟಿಯ ಅಧ್ಯಾಪಕರ ಕಟ್ಟಡದ ಮೇಲೆ ಇಂದು ಬೆಳಗ್ಗೆ ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸಿವೆ ಎಂದು ಸುಮಿ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಡಿಮಿಟ್ರೋ ಝೈವಿಟ್ಸ್ಕಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್​ ಮೇಲೆ ರಷ್ಯಾ ಆಕ್ರಮಣದ ವಿಚಾರವಾಗಿ ವೋಟಿಂಗ್ ನಡೆದಿದೆ. 141 ರಾಷ್ಟ್ರಗಳು ಉಕ್ರೇನ್‌ ಮೇಲಿನ ರಷ್ಯಾ ದಾಳಿಯ ವಿರುದ್ಧ ಮತ ಚಲಾಯಿಸಿದರೆ, ಐದು ರಾಷ್ಟ್ರಗಳು ರಷ್ಯಾ ಪರವಾಗಿ ಮತ ಚಲಾಯಿಸಿವೆ. ಇನ್ನು ಭಾರತ ಸೇರಿ 35 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.