ಕೀವ್( ಉಕ್ರೇನ್): ದೀರ್ಘಕಾಲದಿಂದ ಬಳಕೆಯಾಗದ ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಪ್ರಯತ್ನಿಸುತ್ತಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಮಾಡಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
-
Russian occupation forces are trying to seize the #Chornobyl_NPP. Our defenders are giving their lives so that the tragedy of 1986 will not be repeated. Reported this to @SwedishPM. This is a declaration of war against the whole of Europe.
— Володимир Зеленський (@ZelenskyyUa) February 24, 2022 " class="align-text-top noRightClick twitterSection" data="
">Russian occupation forces are trying to seize the #Chornobyl_NPP. Our defenders are giving their lives so that the tragedy of 1986 will not be repeated. Reported this to @SwedishPM. This is a declaration of war against the whole of Europe.
— Володимир Зеленський (@ZelenskyyUa) February 24, 2022Russian occupation forces are trying to seize the #Chornobyl_NPP. Our defenders are giving their lives so that the tragedy of 1986 will not be repeated. Reported this to @SwedishPM. This is a declaration of war against the whole of Europe.
— Володимир Зеленський (@ZelenskyyUa) February 24, 2022
ರಷ್ಯಾ ಪಡೆಗಳು ಚೋರ್ನೋಬಿಲ್ ಪರಮಾಣು ಸ್ಥಾವರವನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿವೆ. ರಷ್ಯಾ ಪಡೆಗಳ ಆಕ್ರಮಣವನ್ನು ನಮ್ಮ ಪಡೆಗಳು ಸಮರ್ಥವಾಗಿ ತಡೆಯುತ್ತಿದ್ದು, 1986 ರ ದುರಂತವನ್ನು ಪುನರಾವರ್ತಿಸದಂತೆ ತಮ್ಮ ಪ್ರಾಣ ಒತ್ತೆ ಇಟ್ಟು ಕಾಪಾಡುತ್ತಿವೆ. ಇದು ಇಡೀ ಯುರೋಪ್ ವಿರುದ್ಧದ ಯುದ್ಧದ ಘೋಷಣೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಏಪ್ರಿಲ್ 26, 1986 ರಂದು ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಅತಿದೊಡ್ಡ ದುರಂತ ಸಂಭವಿಸಿತ್ತು. ಈ ಸ್ಥಾವರದಲ್ಲಿನ ನಾಲ್ಕನೇ ರಿಯಾಕ್ಟರ್‌ನ ಮಧ್ಯಭಾಗದ ಸೋರಿಕೆಯಿಂದಾಗಿ ಭಾರಿ ಪ್ರಮಾಣದ ಪರಮಾಣು ಸೋರಿಕೆಯಾಗಿ ಸುಮಾರು 5 ಲಕ್ಷ ಮಂದಿ ಅಸುನೀಗಿದ್ದರು. ಅಂದಿನಿಂದ ಈ ಪರಮಾಣು ಸ್ಥಾವರವನ್ನು ಮುಚ್ಚಲಾಗಿದೆ. ಇದೀಗ ಈ ಅಣುಸ್ಥಾವರನ್ನ ವಶಕ್ಕೆ ಪಡೆಯಲು ರಷ್ಯಾ ಪಡೆಗಳು ಮುಂದಾಗಿವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಇದನ್ನು ಓದಿ: ಪುಟಿನ್ ಜತೆ ಮೋದಿ ಮಾತುಕತೆ ಸಾಧ್ಯತೆ: ದೇಶದ ರಕ್ಷಣೆಗೆ ಪ್ರತಿಯೊಬ್ಬರಿಗೂ ಗನ್ ಕೊಡ್ತೇವಿ ಎಂದ ಉಕ್ರೇನ್!