ETV Bharat / international

ಉಕ್ರೇನ್​ ವಿರುದ್ಧ ಮತ್ತೊಂದು ಹೈಪರ್ಸಾನಿಕ್ ಕ್ಷಿಪಣಿ ಬಳಿಸಿದ ರಷ್ಯಾ

author img

By

Published : Mar 20, 2022, 3:51 PM IST

ಕ್ಯಾಸ್ಪಿಯನ್ ಸಮುದ್ರದಿಂದ ರಷ್ಯಾದ ಯುದ್ಧನೌಕೆಗಳು ಉಡಾವಣೆ ಮಾಡಿದ ಕಲಿಬ್ರ್ ಕ್ರೂಸ್ ಕ್ಷಿಪಣಿಗಳು ಸಹ ಕೋಸ್ಟಿಯಾಂಟಿನಿವ್ಕಾದಲ್ಲಿನ ಇಂಧನ ಡಿಪೋ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿವೆ..

ಉಕ್ರೇನ್​ ವಿರುದ್ಧ ಮತ್ತೊಂದು ಹೈಪರ್ಸಾನಿಕ್ ಕ್ಷಿಪಣಿ ಬಳಿಸಿದ ರಷ್ಯಾ
ಉಕ್ರೇನ್​ ವಿರುದ್ಧ ಮತ್ತೊಂದು ಹೈಪರ್ಸಾನಿಕ್ ಕ್ಷಿಪಣಿ ಬಳಿಸಿದ ರಷ್ಯಾ

ಮಾಸ್ಕೋ : ದೀರ್ಘ ಶ್ರೇಣಿಯ ಹೈಪರ್ಸಾನಿಕ್ ಮತ್ತು ಕ್ರೂಸ್ ಕ್ಷಿಪಣಿಗಳೊಂದಿಗೆ ಉಕ್ರೇನಿಯನ್ ಮಿಲಿಟರಿ ಮೇಲೆ ಹೊಸ ಸರಣಿಯ ದಾಳಿಯನ್ನು ನಡೆಸಲಾಗಿದೆ ಎಂದು ರಷ್ಯಾದ ಮಿಲಿಟರಿ ಹೇಳಿದೆ.

ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಕಿಂಜಾಲ್ ಹೈಪರ್ಸಾನಿಕ್ ಕ್ಷಿಪಣಿಯು ಮೈಕೊಲೈವ್ನ ಕಪ್ಪು ಸಮುದ್ರದ ಬಂದರಿನ ಬಳಿಯ ಕೊಸ್ಟಿಯಾಂಟಿನಿವ್ಕಾದಲ್ಲಿರುವ ಉಕ್ರೇನಿಯನ್ ಇಂಧನ ಡಿಪೋವನ್ನು ದ್ವಂಸ ಮಾಡಿದೆ ಎಂದು ಹೇಳಿದ್ದಾರೆ.

ಇದರ ಶಕ್ತಿ ಏನು?: ಈ ಹೊಸ ಸರಣಿಯ ದಾಳಿ 2,000 ಕಿಲೋಮೀಟರ್ (1,250 ಮೈಲುಗಳು) ದೂರದಲ್ಲಿರುವ ಗುರಿಗಳನ್ನು ಶಬ್ದದ 10 ಪಟ್ಟು ವೇಗದಲ್ಲಿ ಹೊಡೆಯುವ ಸಾಮರ್ಥ್ಯ ಹೊಂದಿದೆ.

ಹಿಂದಿನ ದಿನ, ಪಶ್ಚಿಮ ಉಕ್ರೇನ್‌ನ ಕಾರ್ಪಾಥಿಯನ್ ಪರ್ವತಗಳಲ್ಲಿನ ಡಿಲಿಯಾಟಿನ್‌ನಲ್ಲಿ ಯುದ್ಧ ಸಾಮಗ್ರಿ ಡಿಪೋವನ್ನು ನಾಶಮಾಡಲು ಕಿಂಜಾಲ್ ಅನ್ನು ಮೊದಲ ಬಾರಿಗೆ ಬಳಕೆ ಮಾಡಲಾಗಿತ್ತು ಎಂದು ರಷ್ಯಾದ ಮಿಲಿಟರಿ ಹೇಳಿದೆ.

ಇದನ್ನೂ ಓದಿ: ಜೀವಕಳೆ ಕಳೆದುಕೊಂಡು ಸ್ಮಶಾನದಂತಾದ ಉಕ್ರೇನ್​ ನಗರಗಳು..

ಕ್ಯಾಸ್ಪಿಯನ್ ಸಮುದ್ರದಿಂದ ರಷ್ಯಾದ ಯುದ್ಧನೌಕೆಗಳು ಉಡಾವಣೆ ಮಾಡಿದ ಕಲಿಬ್ರ್ ಕ್ರೂಸ್ ಕ್ಷಿಪಣಿಗಳು ಸಹ ಕೋಸ್ಟಿಯಾಂಟಿನಿವ್ಕಾದಲ್ಲಿನ ಇಂಧನ ಡಿಪೋ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿವೆ.

ಕಪ್ಪು ಸಮುದ್ರದಿಂದ ಉಡಾವಣೆಯಾದ ಕಲಿಬ್ರ್ ಕ್ಷಿಪಣಿಗಳನ್ನು ಉತ್ತರ ಉಕ್ರೇನ್‌ನ ಚೆರ್ನಿಹಿವ್ ಪ್ರದೇಶದ ನಿಜಿನ್‌ನಲ್ಲಿನ ರಕ್ಷಣಾ ದುರಸ್ತಿ ಘಟಕವನ್ನು ನಾಶ ಮಾಡಲು ಬಳಸಲಾಗಿದೆ ಎಂದು ಕೊನಾಶೆಂಕೋವ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.