ETV Bharat / international

ಬ್ರಿಟನ್ ನೇವಿ ಅತಿಕ್ರಮ ಗಡಿ ಪ್ರವೇಶ; ಗುಂಡು ಹಾರಿಸಿ ಎಚ್ಚರಿಸಿದ ರಷ್ಯಾ

author img

By

Published : Jun 23, 2021, 10:31 PM IST

ಬ್ರಿಟನ್​ನ ಎಚ್‌ಎಂಎಸ್ ಡಿಫೆಂಡರ್ ಯುದ್ಧ ನೌಕೆ ರಷ್ಯಾ ಗಡಿಗೆ ನುಗ್ಗಿದ್ದು, ಅಲ್ಲಿನ ನಿಯಮಗಳನ್ನು ಉಲ್ಲಂಘಿಸಿದರೆ ಶಸ್ತ್ರಾಸ್ತ್ರಗಳನ್ನು ಬಳಸಬೇಕಾಗುತ್ತದೆ ಎಂಬ ಸೂಚನೆ ನೀಡಿದೆ. ಆದರೆ ಬ್ರಿಟಿಷ್​ ಯುದ್ಧನೌಕೆ ಈ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸಚಿವಾಲಯ ತಿಳಿಸಿದೆ.

Russia fires warning shots to deter UK warship in Black Sea

ಮಾಸ್ಕೋ: ಕಪ್ಪು ಸಮುದ್ರದಲ್ಲಿ ದೇಶದ ಜಲ ಪ್ರದೇಶದ ಗಡಿಯನ್ನು ದಾಟಿ ಬಂದಿದ್ದ ಬ್ರಿಟನ್​ನ ಬ್ರಿಟಿಷ್ ರಾಯಲ್ ನೇವಿ ಹಡಗನ್ನು ತಡೆಯಲು ರಷ್ಯಾ ಎಚ್ಚರಿಕೆ ನೀಡುವ ಗುಂಡುಗಳನ್ನು ಹಾರಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಕ್ರಿಮಿಯಾದ ಕೇಪ್ ಫಿಯೊಲೆಂಟ್ ಕರಾವಳಿಯಲ್ಲಿ ಈ ಘಟನೆ ನಡೆದಿದೆ.

ಬ್ರಿಟನ್​ನ ಎಚ್‌ಎಂಎಸ್ ಡಿಫೆಂಡರ್ ಯುದ್ಧ ನೌಕೆ ರಷ್ಯಾ ಗಡಿಗೆ ನುಗ್ಗಿದ್ದು, ಅಲ್ಲಿನ ನಿಯಮಗಳನ್ನು ಉಲ್ಲಂಘಿಸಿದರೆ ಶಸ್ತ್ರಾಸ್ತ್ರಗಳನ್ನು ಬಳಸಬೇಕಾಗುತ್ತದೆ ಎಂಬ ಸೂಚನೆ ನೀಡಿದೆ. ಆದರೆ ಬ್ರಿಟಿಷ್​ ಯುದ್ಧನೌಕೆ ಈ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸಚಿವಾಲಯ ತಿಳಿಸಿದೆ. 2014ರಲ್ಲಿ ಉಕ್ರೇನ್‌ನಿಂದ ಈ ಪ್ರದೇಶವನ್ನು ರಷ್ಯಾ ವಶಪಡಿಸಿಕೊಂಡಿತ್ತು.

ಎಸ್‌ಯು-24 ಯುದ್ಧ ವಿಮಾನವು ಬ್ರಿಟನ್‌ನ ಯುದ್ಧನೌಕೆ ಸಾಗಿಬರುತ್ತಿದ್ದ ಮಾರ್ಗದಲ್ಲಿ ನಾಲ್ಕು ಬಾಂಬ್‌ಗಳನ್ನು ಬೀಳಿಸಿದೆ. ಈ ಎಚ್ಚರಿಕೆ ನೀಡುವ ದಾಳಿ ಬಳಿಕ ಬ್ರಿಟನ್ ಹಡಗು ರಷ್ಯಾದ ಜಲಭಾಗದಿಂದ ಹಿಂತಿರುಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಘಟನೆಯ ಬಳಿಕ ರಷ್ಯಾ ರಕ್ಷಣಾ ಸಚಿವಾಲಯವು ಬ್ರಿಟನ್‌ನ ಸೇನಾ ರಾಯಭಾರ ಕಚೇರಿಗೆ ಸಮನ್ಸ್ ನೀಡಿದೆ. ಆದರೆ ಬ್ರಿಟಿಷ್ ರಕ್ಷಣಾ ಸಚಿವಾಲಯವು ಈ ಘಟನೆಯನ್ನು ನಿರಾಕರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.