ಮಾಸ್ಕೋ: ವಿಶ್ವಸಂಸ್ಥೆಯಿಂದ ರಷ್ಯಾದ ರಾಜತಾಂತ್ರಿಕರನ್ನು ವಾಷಿಂಗ್ಟನ್ ಇತ್ತೀಚೆಗಷ್ಟೇ ಹೊರಹಾಕಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ಅಮೆರಿಕ ರಾಯಭಾರಿಯನ್ನು ಹೊರಹಾಕಿದೆ. ಈ ಸಂಬಂಧ ಹೇಳಿಕೆ ನೀಡಿರುವ ರಷ್ಯಾ, ರಷ್ಯಾದ ವಿದೇಶಾಂಗ ಇಲಾಖೆ ಬುಧವಾರ ಮಾಸ್ಕೋದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಹಿರಿಯ ರಾಜತಾಂತ್ರಿಕರನ್ನು ಕರೆಸಿಕೊಂಡು ಈ ಆದೇಶವನ್ನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ರಾಯಭಾರ ಕಚೇರಿ ಹಿರಿಯ ಅಧಿಕಾರಿಯನ್ನು ಕರೆಯಿಸಿ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳ ಪಟ್ಟಿ ಪಡೆದು, "ಪರ್ಸನಾ ನಾನ್ ಗ್ರಾಟಾ" ಎಂದು ಘೋಷಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ರಷ್ಯಾ ವಿರುದ್ಧ ಯಾವುದೇ ನಿರ್ಣಯ ಅಥವಾ ನಿರ್ಧಾರ ಕೈಗೊಂಡರೆ ಅದಕ್ಕೆ ತಕ್ಕ ತಿರುಗೇಟು ನೀಡಿಯೇ ನೀಡುತ್ತೇವೆ ಎಂದು ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳಿಗೆ ರಷ್ಯಾ ಎಚ್ಚರಿಕೆ ನೀಡಿದೆ.
ಏನಿದು ಪರ್ಸನಾ ನಾನ್ ಗ್ರಾಟಾ: ಸ್ವೀಕಾರಾರ್ಹವಲ್ಲದ ಅಥವಾ ಇಷ್ಟವಿಲ್ಲದ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ. ಅಂದರೆ ರಷ್ಯಾ ಅಮೆರಿಕದ ರಾಜತಾಂತ್ರಿಕರಿಗೆ ನೀಡಿದ ಮಾನ್ಯತೆ ವಾಪಸ್ ಪಡೆದಿದ್ದು, ಮಾನ್ಯತೆ ಇಲ್ಲ ವ್ಯಕ್ತಿ ಎಂಬುದಾಗಿ ಪರಿಗಣಿಸುವುದಾಗಿದೆ. ಫೆಬ್ರವರಿ 28 ರಂದು ಅಮೆರಿಕದ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯಲ್ಲಿನ ರಷ್ಯಾದ ರಾಯಭಾರ ಕಚೇರಿಯು 12 ಸಿಬ್ಬಂದಿಯನ್ನು ಹೊಂದಿದ್ದು, ಹಾಗೂ ವಿಶ್ವಸಂಸ್ಥೆಯ ಸೆಕ್ರೆಟರಿಯೇಟ್‌ನೊಂದಿಗೆ ಕೆಲಸ ಮಾಡುತ್ತಿರುವ ರಷ್ಯಾದ ಪ್ರಜೆಯನ್ನು ಹೊರಹಾಕುವುದಾಗಿ ಘೋಷಿಸಿತ್ತು.
ಅಮೆರಿಕದ ಈ ಆದೇಶದಿಂದ ರೊಚ್ಚಿಗೆದ್ದ ರಷ್ಯಾ ಕೂಡಾ, ಮಾಸ್ಕೋದಿಂದ ಅಮೆರಿಕದ ರಾಯಭಾರ ಸಿಬ್ಬಂದಿಯನ್ನು ಹೊರಹಾಕುವ ನಿರ್ಣಯ ಕೈಗೊಂಡಿದೆ.
ಇದನ್ನು ಓದಿ:ಚೀನಾದಲ್ಲಿ ಪತನಗೊಂಡ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ.. ಪೈಲಟ್ಗಳ ಮಾಹಿತಿ ಬಹಿರಂಗ