ETV Bharat / international

ಬ್ರೇಕ್ಸಿಟ್​ ಮಸೂದೆ ಬ್ರಿಟನ್​ ಸಂಸತ್​ನಲ್ಲಿ ಅಂಗೀಕಾರ : ಯುರೋಪಿಯನ್ ಒಕ್ಕೂಟದಿಂದ ಯುಕೆ ಅಧಿಕೃತವಾಗಿ ಹೊರಕ್ಕೆ - ಯುರೋಪಿಯನ್ ಒಕ್ಕೂಟದಿಂದ ಯುಕೆ ಅಧಿಕೃತವಾಗಿ ಹೊರಕ್ಕೆ

ಬ್ರೇಕ್ಸಿಟ್​​ ಒಪ್ಪಂದವನ್ನು ಅಂಗೀಕರಿಸುವ ರಾಣಿ ಎಲಿಜಬೆತ್​ II ಅಸೆಂಟ್​ ಮಸೂದೆ ಬ್ರಿಟನ್​ ಸಂಸತ್​ನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದೆ. ಮಸೂದೆ ಅಂಗೀಕಾರಕ್ಕೆ ಸಹರಿಸಿದಕ್ಕಾಗಿ ಪ್ರಧಾನಿ ಬೋರಿಸ್ ಜಾನ್ಸನ್ ಸಂಸದರು ಮತ್ತು ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದ್ದಾರೆ.

Royal Assent means Brexit all set for New Year's Day
ಬ್ರಿಕ್ಸಿಟ್​ ಮಸೂದೆ ಬ್ರಿಟನ್​ ಸಂಸತ್​ನಲ್ಲಿ ಅಂಗೀಕಾರ
author img

By

Published : Dec 31, 2020, 10:01 PM IST

ಲಂಡನ್​ : ಬ್ರೇಕ್ಸಿಟ್​ ಒಪ್ಪಂದವನ್ನು ಅಂಗೀಕರಿಸುವ ರಾಣಿ ಎಲಿಜಬೆತ್​ II ಅಸೆಂಟ್​ ಮಸೂದೆ ಸಂಸತ್​ನ ಉಭಯ ಸದನಗಳಲ್ಲಿ ಅನುಮೋದನೆ​ಗೊಳ್ಳುವ ಮೂಲಕ ಯುರೋಪಿಯನ್ ಒಕ್ಕೂಟದಿಂದ ಅಧಿಕೃತವಾಗಿ ಹೊರ ಬರಲು ಯುಕೆ ಸಜ್ಜಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಪ್ರಧಾನಿ ಬೋರಿಸ್​ ಜಾನ್ಸನ್​, ಹೊಸ ವರ್ಷಕ್ಕೆ ಇದು ಹೊಸ ಆರಂಭವಾಗಿದೆ ಎಂದಿದ್ದಾರೆ. ಯುರೋಪಿಯನ್ ಯೂನಿಯನ್ (ಫ್ಯೂಚರ್ ರಿಲೇಶನ್‌ಶಿಪ್) ಮಸೂದೆಯನ್ನು ಒಂದೇ ದಿನದಲ್ಲಿ ಅಂಗೀಕರಿಸಿದ್ದಕ್ಕಾಗಿ ಸಂಸದರು ಮತ್ತು ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಅವರು ಹೇಳಿದ್ದಾರೆ.

ಓದಿ : ಕರಾಚಿಯಲ್ಲಿ ದೇವಾಲಯ ಧ್ವಂಸ ಖಂಡಿಸಿ ಪ್ರತಿಭಟನೆ

ಈ ಮಹಾನ್ ದೇಶದ ಹಣೆ ಬರಹ ಈಗ ನಮ್ಮ ಕೈಯಲ್ಲಿ ದೃಢವಾಗಿದೆ. ನಾವು ಈ ಕರ್ತವ್ಯವನ್ನು ಸದುದ್ದೇಶದಿಂದ ಮತ್ತು ಬ್ರಿಟಿಷ್ ಸಾರ್ವಜನಿಕರ ಹಿತಾಸಕ್ತಿಗಳೊಂದಿಗೆ ನಿರ್ವಹಿಸುವುದಾಗಿ ಹೃದಯದಿಂದ ಹೇಳುತ್ತೇವೆ. 31 ಡಿಸೆಂಬರ್​ 11 ಗಂಟೆ ನಮ್ಮ ದೇಶದ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ ಮತ್ತು ನಮ್ಮ ದೊಡ್ಡ ಮಿತ್ರ ಯುರೋಪಿಯನ್ ಒಕ್ಕೂಟದೊಂದಿಗಿನ ಹೊಸ ಸಂಬಂಧದ ಆರಂಭವಾಗಿದೆ ಎಂದು ಜಾನ್ಸನ್​ ಹೇಳಿದ್ದಾರೆ.

2016 ರಲ್ಲಿ ಯುರೋಪಿಯನ್ ಒಕ್ಕೂಟದಿಂದ ಹೊರ ಬರುವ ಬ್ರೇಕ್ಸಿಟ್​ ಒಪ್ಪಂದ ಮಾಡಿಕೊಳ್ಳಲಾಯಿತು. ಇದನ್ನು ಅಂಗೀಕರಿಸುವ ಮಸೂದೆ ನಾಲ್ಕೂವರೆ ವರ್ಷಗಳ ಬಳಿಕ ಬ್ರಿಟನ್​ ಸಂಸತ್​ನಿನಲ್ಲಿ ಅಂಗೀಕಾರವಾಗಿದೆ. ಸಂಸತ್​ನ 521 ಸದಸ್ಯರ ಪೈಕಿ 448 ಮತಗಳನ್ನು ಪಡೆಯುವ ಮೂಲಕ ಜಾನ್ಸನ್​ ಸರ್ಕಾರದ ಮಸೂದೆ ಅಂಗೀಕಾರವಾಯಿತು. ಈ ಮಸೂದೆಯ ಅಂಗೀಕಾರಾದ ಸಂಬಂಧಪಟ್ಟಂತೆ ಯುಕೆಯ ಮಾಜಿ ಪ್ರಧಾನಿಗಳಾದ ಡೇವಿಡ್​ ಕ್ಯಾಮರೋನ್ ಮತ್ತು ಥೆರೆಸಾ ಅಧಿಕಾರಿ ಕಳೆದುಕೊಂಡಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.