ಲಂಡನ್ : ಪ್ರಿನ್ಸ್ ವಿಲಿಯಂ ಮತ್ತು ಅವರ ಪತ್ನಿ ಡಚೆಸ್ ಕ್ಯಾಥರೀನ್ ಅವರು ಕೋವಿಡ್-19 ಲಸಿಕೆ ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದು, ಲಸಿಕೆ ಕುರಿತು ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಕುರಿತು ಮಾಹಿತಿ ನೀಡಿರುವ ವಿಲಿಯಂ, ಕ್ಯಾಥರೀನ್ ಮತ್ತು ನಾನು ವೈದ್ಯಕೀಯ ತಜ್ಞರಲ್ಲ. ಆದರೆ, ವ್ಯಾಕ್ಸಿನೇಷನ್ ಪಡೆಯುವುದನ್ನು ನಾವು ಪೂರ್ಣ ಹೃದಯದಿಂದ ಬೆಂಬಲಿಸುತ್ತೇವೆ. ಕೊರೊನಾ ಲಸಿಕೆ ಕುರಿತು ಬಹಳಷ್ಟು ಜನರೊಂದಿಗೆ ಚರ್ಚಿಸಿದ್ದೇವೆ. ಇದು ಹೆಚ್ಚು ಉಪಯುಕ್ತವಾಗಿದ್ದು, ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಲು ಮುಂದೆ ಬರಬೇಕೆಂದು ಮನವಿ ಮಾಡಿದರು.
ಇನ್ನು, ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಕುರಿತು ನಾವು ಜಾಗರೂಕರಾಗಿರಬೇಕು. ಕೆಲವರು ಸುಳ್ಳು ಮಾಹಿತಿಯನ್ನು ನಂಬಿ ಆತಂಕಕ್ಕೆ ಒಳಗಾಗುತ್ತಾರೆ. ನೀವು ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗೆ ತಲೆಗೊಡಬೇಡಿ ಎಂದಿದ್ದಾರೆ.