ಲಂಡನ್: ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್, ಬ್ರಿಟಿಷ್ ತೆರಿಗೆ ಪಾವತಿದಾರರಿಗೆ 2.4 ಮಿಲಿಯನ್ ಪೌಂಡ್ (3.2 ಮಿಲಿಯನ್ ಯುಎಸ್ಡಿ) ಹಣವನ್ನು ಹಿಂದಿರುಗಿಸಿದ್ದಾರೆ. ಈ ಹಣವನ್ನು ಯುಕೆಯಲ್ಲಿರುವ ಮನೆಯನ್ನು ನವೀಕರಿಸಲು ಬಳಸಿಕೊಳ್ಳಲಾಗಿತ್ತು. ಆದರೆ ಜನವರಿಯಲ್ಲಿ ಅವರು ಘೋಷಣೆ ಮಾಡಿದಂತೆ ರಾಯಲ್ ಜೀವನ ತ್ಯಜಿಸಲು ಮುಂದಾಗಿದ್ದು, ಕ್ಯಾಲಿಫೋರ್ನಿಯಾಗೆ ತೆರಳುತ್ತಿದ್ದಾರೆ.
ಲಂಡನ್‌ನ ಪಶ್ಚಿಮಕ್ಕೆ ಇರುವ ವಿಂಡ್‌ಸರ್ ಕ್ಯಾಸಲ್‌ನ ಮೈದಾನದಲ್ಲಿರುವ ಫ್ರಾಗ್‌ಮೋರ್ ಕಾಟೇಜ್‌ನ ನವೀಕರಣ ದುಬಾರಿ ಎಂದು ಈ ಹಿಂದೆ ಕೆಲ ಬ್ರಿಟಿಷ್ ಮಾಧ್ಯಮಗಳು ಟೀಕಿಸಿದ್ದವು. ಪ್ರಿನ್ಸ್ ಹ್ಯಾರಿ ಮತ್ತು ಅಮೆರಿಕಾದ ಮಾಜಿ ನಟಿ ಮೇಘನ್ ತಮ್ಮಷ್ಟಕ್ಕೇ ಹೊಸ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಮತ್ತು ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಣವನ್ನು ಮರುಪಾವತಿ ಮಾಡಿದ್ದಾರೆ. ಇನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪಾಲ್ಗೊಳ್ಳಲು ನೆಟ್‌ಫ್ಲಿಕ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಎಂದು ಅವರು ಕಳೆದ ವಾರ ಘೋಷಿಸಿದ್ದರು.
ಅಧಿಕೃತವಾಗಿ ಡ್ಯೂಕ್ ಮತ್ತು ಡಚೆಸ್ ಆಫ್ ಸಸೆಕ್ಸ್ ಎಂದು ಕರೆಯಲ್ಪಡುವ ಈ ದಂಪತಿ ಕ್ಯಾಲಿಫೋರ್ನಿಯಾಗೆ ತೆರಳಿದ್ದಾರೆ. ಆದರೆ ಹ್ಯಾರಿಯ ಅಜ್ಜಿ ದಿ ಕ್ವೀನ್ ನೇ ಎಲಿಜಬೆತ್ ಅವರೊಂದಿಗಿನ ಒಪ್ಪಂದದ ನಿಯಮಗಳ ಪ್ರಕಾರ ಅವರು ಬ್ರಿಟನ್‌ಗೆ ಹಿಂತಿರುಗಿದಾಗ ಫ್ರಾಗ್ಮೋರ್ ಕಾಟೇಜ್ಅನ್ನು ತಮ್ಮ ಮನೆಯನ್ನಾಗಿ ಇಟ್ಟುಕೊಳ್ಳುತ್ತಾರೆ.
"ದಿ ಡ್ಯೂಕ್ ಆಫ್ ಸಸೆಕ್ಸ್‌ನಿಂದ ಸಾರ್ವಭೌಮ ಅನುದಾನಕ್ಕೆ ಕೊಡುಗೆ ನೀಡಲಾಗಿದೆ" ಎಂದು ದಂಪತಿಯ ವಕ್ತಾರರು ಹೇಳಿಕೆ ನೀಡಿದ್ದಾರೆ.