ಮಾಸ್ಕೋ(ರಷ್ಯಾ): ರಷ್ಯಾ ಮತ್ತು ಉಕ್ರೇನ್ ಮಧ್ಯೆ ಎರಡು ವಾರಗಳಿಂದ ನಡೆಯುತ್ತಿರುವ ಯುದ್ಧದಿಂದ ಸಾವು ನೋವುಗಳು ದಾಖಲಾಗುತ್ತಿರುವುದರ ಮಧ್ಯೆಯೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 'ಬದಲಾವಣೆ'ಯ ಮಾತನ್ನಾಡಿದ್ದಾರೆ.
ಉಭಯ ದೇಶಗಳ ಮಧ್ಯೆ ಯುದ್ಧದ ಹೊರತಾಗಿ ಮಾತುಕತೆಗಳು ಜಾರಿಯಲ್ಲಿವೆ. ಅವು 'ಸಕಾರಾತ್ಮಕ ಬದಲಾವಣೆಗಳು' ಕಾಣುತ್ತಿವೆ. ಈ ಬಗ್ಗೆ ನಮ್ಮ ನಿಯೋಗದ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ಪುಟಿನ್ ಇಂದು ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಬೆಲಾರಸ್ನ ಅಲೆಕ್ಸಾಂಡರ್ ಲುಕಾಶೆಂಕೊಗೆ ಹೇಳಿದ್ದಾರೆ.
ನಮ್ಮ ಮತ್ತು ಉಕ್ರೇನ್ ದೇಶದ ನಿಯೋಗಗಳ ಮಧ್ಯೆ ನಿರಂತರವಾಗಿ ಮಾತುಕತೆಗಳು ನಡೆಯುತ್ತಿವೆ. ಇದರಿಂದಾಗಿ ಹಲವೆಡೆಗಳಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸಲು ಮಾನವ ಕಾರಿಡಾರ್ಗಳನ್ನು ರೂಪಿಸಲಾಗಿದೆ ಎಂದು ರಷ್ಯಾ ತನ್ನ ಮಿತ್ರರಾಷ್ಟ್ರವಾದ ಬೆಲಾರಸ್ಗೆ ಮಾಹಿತಿ ನೀಡಿದೆ. ರಷ್ಯಾದ ಪಡೆಗಳು ಬೆಲಾರಸ್ ಪ್ರದೇಶವನ್ನು ಒಳಗೊಂಡಂತೆ ಎಲ್ಲ ದಿಕ್ಕುಗಳಿಂದ ಉಕ್ರೇನ್ ಅನ್ನು ಸುತ್ತುವರೆದಿದೆ.
ಇದನ್ನೂ ಓದಿ: ಆಕಸ್ಮಿಕವಾಗಿ ಪಾಕಿಸ್ತಾನದೊಳಕ್ಕೆ ಬಿದ್ದ ಭಾರತದ ಕ್ಷಿಪಣಿ: ತನಿಖೆಗೆ ಕೇಂದ್ರ ಸೂಚನೆ