ETV Bharat / international

ಕ್ರಿಸ್​​ಮಸ್​​​​ ಆಚರಣೆಗೆ ಕೊರೊನಾ ಅಡ್ಡಿ: ಕೆಲವೇ ಮಂದಿಗಷ್ಟೇ ಪೋಪ್​​​ ದರ್ಶನ - ವ್ಯಾಟಿಕನ್ ಸಿಟಿ

ಕ್ರಿಸ್​ಮಸ್​​​​​​​​​ ವಾರದಲ್ಲಿ ಜನರಿಗೆ ಆಶೀರ್ವಾದ ಮಾಡುತ್ತಿದ್ದ ಪೋಪ್ ಫ್ರಾನ್ಸಿಸ್ ಈ ಬಾರಿ ಕೆಲವೇ ಮಂದಿಗಷ್ಟೇ ಚರ್ಚ್​ ಮುಂಭಾಗ ಸೇರಲು ಅವಕಾಶ ನೀಡಿದ್ದಾರೆ. ಇಲ್ಲಿನ ಸೈಂಟ್​ ಪೀಟರ್​ ಚರ್ಚ್​​​​ನ ಕಿಟಿಕಿಯಿಂದ ಆಶೀರ್ವದಿಸಲು ನಿರ್ಧರಿಸಿದ್ದು, ಚರ್ಚ್​​ ಮುಂಭಾಗದ ಚೌಕದಲ್ಲಿ ಕೆಲವೇ ಮಂದಿಗಷ್ಟೇ ಅವಕಾಶ ಇರಲಿದೆ.

Pope
ಪೋಪ್ ಫ್ರಾನ್ಸಿಸ್
author img

By

Published : Dec 26, 2020, 9:44 PM IST

ವ್ಯಾಟಿಕನ್ ಸಿಟಿ: ಕೊರೊನಾ ನಡುವೆ ಸಂಭ್ರಮದ ಕ್ರಿಸ್​​ಮಸ್ ಆಚರಣೆಗೆ ಬ್ರೇಕ್ ಬಿದ್ದಿದೆ. ವಿಶ್ವದ ಹಲವು ದೇಶಗಳು ಕ್ರಿಸ್​​ಮಸ್ ಆಚರಣೆ ಸರಳವಾಗಿಸಿದ್ದು, ಕೋವಿಡ್ ಹರಡದಂತೆ ಕ್ರಮ ವಹಿಸಿವೆ. ಈ ಹಿನ್ನೆಲೆ ರೋಮ್, ಇಟಲಿ ನಗರದಲ್ಲಿಯೂ ಆಚರಣೆಗೆ ಕಡಿವಾಣ ಬಿದ್ದಿದೆ.

ಕ್ರಿಸ್​ಮಸ್​​​​​​​​​ ವಾರದಲ್ಲಿ ಜನರಿಗೆ ಆಶೀರ್ವಾದ ಮಾಡುತ್ತಿದ್ದ ಪೋಪ್ ಫ್ರಾನ್ಸಿಸ್ ಈ ಬಾರಿ ಕೆಲವೇ ಮಂದಿಗಷ್ಟೇ ಚರ್ಚ್​ ಮುಂಭಾಗ ಸೇರಲು ಅವಕಾಶ ನೀಡಿದ್ದಾರೆ. ಇಲ್ಲಿನ ಸೈಂಟ್​ ಪೀಟರ್​ ಚರ್ಚ್​​​​ನ ಕಿಟಿಕಿಯಿಂದ ಆಶೀರ್ವದಿಸಲು ನಿರ್ಧರಿಸಿದ್ದು, ಚರ್ಚ್​​ ಮುಂಭಾಗದ ಚೌಕದಲ್ಲಿ ಕೆಲವೇ ಮಂದಿಗಷ್ಟೇ ಅವಕಾಶ ಇರಲಿದೆ.

ಪ್ರತಿ ವರ್ಷ ಈ ಚರ್ಚ್​​​ನ ಮುಂಭಾಗ ಲಕ್ಷಾಂತರ ಮಂದಿ ಸೇರಿರುತ್ತಿದ್ದರು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಯಾರು ಚರ್ಚ್​ನ ಮುಂಭಾಗ ಬರದಂತೆ ಸೂಚಿಸಲಾಗಿದೆ. ಫ್ರಾನ್ಸಿಸ್ ಅಪೊಸ್ತೋಲಿಕ್ ಅರಮನೆಯ ಗ್ರಂಥಾಲಯದಿಂದ ಆಶೀರ್ವಾದವನ್ನು ನೀಡುವ ಬದಲು ಈ ಬಾರಿ ಡಿಜಿಟಲ್​ ಮಾಧ್ಯಮದ ಮೊರೆ ಹೋಗುವ ಸಾಧ್ಯತೆಯೂ ಇದೆ.

ಇಟಲಿಯಲ್ಲಿ ವೈರಸ್​​​​ ಅಬ್ಬರ ಜೋರಾದಾಗ ಲಾಕ್​​​ಡೌನ್ ವಿಧಿಸಲಾಗಿತ್ತು. ಈ ವೇಳೆ, ಪೋಪ್ ಜನರನ್ನು ಭೇಟಿಯಾಗಲು ಸಾಧ್ಯವಾಗದೇ​ ನನಗೆ ಪಂಜರದಲ್ಲಿರುವಂತಹ ಅನುಭವವಾಗುತ್ತಿದೆ ಎಂದಿದ್ದರು. ಇತ್ತೀಚಿಗೆ ಕೊರೊನಾ 2ನೇ ಅಲೆಯಲ್ಲಿಯೂ ಇಟಲಿಯಲ್ಲಿ ಸಾವು ನೋವು ಹೆಚ್ಚಾಗುತ್ತಿದ್ದು, ಸರ್ಕಾರದ ಪ್ರತಿ ಆದೇಶವನ್ನೂ ಪಾಲಿಸುವಂತೆ ಪೋಪ್​​ ಜನತೆಗೆ ಮನವಿ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.