ETV Bharat / international

ಚುನಾವಣೆಯತ್ತ ಮುಖ ಮಾಡಿದ ಯುಕೆ: ಶುರುವಾಯ್ತು ಬ್ರಿಟಿಷರ ಜಟಾಪಟಿ

ಬ್ರಿಟಿಷರು ಸ್ವಯಂ ಮಹತ್ವದ ವಿಷಯಗಳಿಗೆ ಕೊಡುವಷ್ಟು ಗಮನವನ್ನು ಹಣಕಾಸು ಅಥವಾ ವ್ಯವಹಾರದ ವಿಷಯದಲ್ಲಿ ನೀಡುವುದಿಲ್ಲ. ದೇಶದ ಇತ್ತೀಚಿನ ರಾಜಕಾರಣಿಗಳು ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವಂತೆ ಒತ್ತಡ ಹೇರಿರುತ್ತಾರೆ ಎಂದು ಬ್ರಿಟಿಷ್ ಬರಹಗಾರ ಮತ್ತು ವಿಮರ್ಶಕ ಆಡ್ರಿಯನ್ ಗಿಲ್ ಹೇಳಿದ್ದಾರೆ. ಇದೀಗ ಮತ್ತೆ ಸಾರ್ವತ್ರಿಕ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ.

author img

By

Published : Nov 8, 2019, 9:18 PM IST

ಬೋರಿಸ್ ಜಾನ್ಸನ್

ಬ್ರಿಟಿಷ್ ಬರಹಗಾರ ಮತ್ತು ವಿಮರ್ಶಕ ಆಡ್ರಿಯನ್ ಗಿಲ್ ಹೇಳುವಂತೆ ಬ್ರಿಟಿಷರು ರಾಜಕಾರಣಿಗಳನ್ನು ದ್ವೇಷಿಸುತ್ತಾರೆ. ಎಷ್ಟು ದ್ವೇಷಿಸುತ್ತಾರೆಂದರೆ, ಬ್ರಿಟಿಷರು ಸ್ವಯಂ ಮಹತ್ವದ ವಿಷಯಗಳಿಗೆ ಕೊಡುವಷ್ಟು ಗಮನವನ್ನು ಹಣಕಾಸು ಅಥವಾ ವ್ಯವಹಾರದ ವಿಷಯದಲ್ಲಿ ನೀಡುವುದಿಲ್ಲ. ಇತ್ತೀಚಿನ ರಾಜಕಾರಣಿಗಳ ಪ್ರಯತ್ನ ಹತ್ತು ವರ್ಷಗಳಲ್ಲಿ ನಾಲ್ಕು ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವಂತೆ ಒತ್ತಡ ಹೇರಿರುತ್ತಾರೆ ಎಂದಿದ್ದಾರೆ.

ಬ್ರೆಕ್ಸಿಟ್ ಜನಾಭಿಪ್ರಾಯ ಸಂಗ್ರಹದಲ್ಲಿ ಪ್ರತಿಕೂಲ ಫಲಿತಾಂಶ ಬಂದ ಕಾರಣ, ಡೇವಿಡ್ ಕ್ಯಾಮರೂನ್ ರಾಜೀನಾಮೆ ನೀಡಿದ್ದರಿಂದ ಕನ್ಸರ್ವೇಟಿವ್ ಪಕ್ಷದ ಮಾಜಿ ಪ್ರಧಾನಿ ಥೆರೆಸಾ ಮೇ ಅವರು 2016 (ಜೂನ್ 23) ರಂದು ಸರಳವಾದ ಬಹುಮತವನ್ನು ಪಡೆದಿದ್ದರು. (650 ಸದಸ್ಯರ ಸಂಸತ್ತಿನಲ್ಲಿ 330 ಸಂಸದರು). ಪಿಎಂ ಕ್ಯಾಮರೂನ್ ಅವರ ಇತ್ತೀಚಿನ ಪುಸ್ತಕ "ದೊಡ್ಡ ವಿಷಾದದ ಸಂಗತಿಯೆಂದರೆ" ಅಲ್ಲಿ ಯೂರೋಪ್ ಯೂನಿಯನ್ನಿನಲ್ಲಿ ಉಳಿಯುವ ಕುರಿತು ವಹಿಸಿಕೊಂಡು ಮಾತಾಡಿದವರು ಮತಗಳನ್ನು ಕಳೆದುಕೊಂಡರು. ಇದು ಅಂತಿಮವಾಗಿ ದೇಶವನ್ನು ವಿಭಜಿಸಿ, ಸರ್ಕಾರವನ್ನು ಅಸ್ವಸ್ಥಗೊಳಿಸಿ, ಯಾವುದೇ ಒಪ್ಪಂದಗಳಿಲ್ಲದೆ ಬ್ರಿಟನ್, ಯುರೋಪಿಯನ್ ಯೂನಿಯನ್ ತೊರೆಯುವಂತೆ ಮಾಡಿತು ಎಂದು ತಿಳಿಸಿದ್ದಾರೆ.

ಬ್ರೆಕ್ಸಿಟ್ ಮಾತುಕತೆಗಳಲ್ಲಿ ತನ್ನ ಕೈಯನ್ನು ಬಲಪಡಿಸಿದ ಮತದಾರರಿಂದ ದೊಡ್ಡ ಬಹುಮತವನ್ನು ಪಡೆದುಕೊಳ್ಳಬಹುದೆಂದು ನಂಬಿದ್ದ ಥೆರೆಸಾ ಮೇ, ಜೂನ್ 2017 ರಲ್ಲಿ ನಿಗದಿತ ಸಮಯಕ್ಕಿಂತ ಸುಮಾರು ಮೂರು ವರ್ಷಗಳ ಮುಂಚಿತವಾಗಿ ಅವಧಿ ಪೂರ್ವ ಮತದಾನಕ್ಕೆ ತೆರಳಲು ನಿರ್ಧರಿಸಿದರು. ಕೆರಳಿದ ಮತದಾರನು 13 ಸ್ಥಾನಗಳನ್ನು ಕಸಿದುಕೊಂಡು ಅಸ್ಥಿರ ಅಲ್ಪಸಂಖ್ಯಾತ ಸರ್ಕಾರಕ್ಕೆ ಕಾರಣನಾದರು.

ಬ್ರೆಕ್ಸಿಟ್ ವಿಷಯವು ರಾಷ್ಟ್ರದಾದ್ಯಂತ ಆಳವಾದ ರಾಜಕೀಯ ಬಿರುಕುಗಳನ್ನು ಉಂಟುಮಾಡಿದೆ. ಮೇಲುಗೈ ಸಾಧಿಸಿದಂತೆ ಕಂಡುಬರುವ ‘ಲೀವ್ ಇಯು’ ವಿಭಾಗವು ಯುರೋಪಿಯನ್ ಒಕ್ಕೂಟವು ಬ್ರಿಟಿಷ್ ಸಾರ್ವಭೌಮತ್ವವನ್ನು ಅತಿ ಕ್ರಮಿಸಿದೆ ಎಂದು ನಂಬಿದ್ದು, ಅದನ್ನು ಪುನಃ ಪಡೆದುಕೊಳ್ಳಬೇಕಾಗಿದೆ ಎಂದು ಭಾವಿಸುತ್ತದೆ. ಆದಾಗ್ಯೂ, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್, ಬ್ರೆಕ್ಸಿಟ್ ಅನ್ನು ತೀವ್ರವಾಗಿ ವಿರೋಧಿಸುತ್ತವೆ. ಯುರೋಪಿಯನ್ ಯೂನಿಯನ್ ತೊರೆಯುವ ಪ್ರಧಾನಿ ಮೇ ಅವರ ಪ್ರಸ್ತಾಪವನ್ನು ಮೂರು ಬಾರಿ ಸಂಸತ್ತು ತಿರಸ್ಕರಿಸಿತು. ಈ ವರ್ಷ ಜೂನ್‌ನಲ್ಲಿ ಅಧಿಕಾರವನ್ನು ತ್ಯಜಿಸುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯಿರಲಿಲ್ಲ.

ಈ ಬೆಳವಣಿಗೆಯು ಜುಲೈ 24 ರಂದು ದೀರ್ಘಕಾಲದ ಆಕಾಂಕ್ಷಿ ಮತ್ತು ಬ್ರೆಕ್ಸಿಟ್ ಸಮರ್ಥಕ ಬೋರಿಸ್ ಜಾನ್ಸನ್ ಅವರನ್ನು ಅಧಿಕಾರಕ್ಕೆ ಕರೆತಂದಿತು. ತನ್ನ ಹಿಂದಿನ ಅವತಾರದಲ್ಲಿ ಬ್ರಸೆಲ್ಸ್ ಮೂಲದ ಪತ್ರಕರ್ತನಾಗಿದ್ದ ಅವರು ಬ್ರಿಟನ್​ಅನ್ನು ಇಯುನಿಂದ ಹೊರಹಾಕುವಂತೆ ಸಕ್ರಿಯವಾಗಿ ಪ್ರಚಾರ ಮಾಡಿದ್ದರು. 17 ಅಕ್ಟೋಬರ್ 2019 ರಂದು ಅವರು ಇಯು ಜೊತೆ ಬ್ರೆಕ್ಸಿಟ್ ಒಪ್ಪಂದವನ್ನು ಮಾಡಿಕೊಂಡರು. ಇದು ನಮ್ಮ ದೇಶಕ್ಕೆ ದೊಡ್ಡ ವಿಷಯ. ಇಯುನಲ್ಲಿರುವ ನಮ್ಮ ಸ್ನೇಹಿತರಿಗೂ ಇದು ತುಂಬಾ ಒಳ್ಳೆಯದು ಎಂದು ನಾನು ನಂಬುತ್ತೇನೆ ಎಂದು ಆ ಸಮಯದಲ್ಲಿ ಹೇಳಿದ್ದರು. ಅದೇನೇ ಇದ್ದರೂ, ಸರ್ಕಾರವನ್ನು ಮುಳುಗದಂತೆ ಕಾಯುತ್ತಿರುವ ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ (ಡಿಯುಪಿ) ಸೇರಿದಂತೆ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಒಪ್ಪಂದವನ್ನು ವಿರೋಧಿಸಿ, ಹೋರಾಟವನ್ನು ನಾಗರಿಕರ ನ್ಯಾಯಾಲಯಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದವು. ಈಗ ಡಿಸೆಂಬರ್ 12 ರಂದು ಮತದಾನ ನಿಗದಿಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ.

ಭಾರತ ಬ್ರೆಕ್ಸಿಟ್ ಅನ್ನು ಹೇಗೆ ನೋಡಬೇಕು? ಇದು ಬ್ರಿಟನ್‌ನ ನೀತಿಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ? ಎಂದು ಜುಲೈ 2018 ರಲ್ಲಿ ಪ್ರಧಾನಿ ಮೇ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ದೃಷ್ಟಿಕೋನವನ್ನು ಒದಗಿಸಿ ಕೊಟ್ಟಿದ್ದಾರೆ. ನಾವು ಕಾರ್ಯತಂತ್ರದ ಸಹಭಾಗಿತ್ವವನ್ನು ರೂಪಿಸುವಾಗ ಭವಿಷ್ಯವನ್ನು ನೋಡಬೇಕೆಂದು ನಾನು ಬಯಸುತ್ತೇನೆ. ಯುಕೆ, ಇಯುವನ್ನು ತೊರೆದಾಗ ಮತ್ತು ಭಾರತ ಮುಂದಿನ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಲಾಗಿತ್ತು. ಇದರಿಂದ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಮೇಲೆ ವೀಸಾ ನಿರ್ಬಂಧವನ್ನು ಸರಾಗಗೊಳಿಸಬಹುದು. ಪ್ರವೇಶ ಮತ್ತು ಉದ್ಯೋಗದ ಅಡೆತಡೆಗಳಿಂದಾಗಿ 2010-11ರಲ್ಲಿ 39,090 ರಷ್ಟಿದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯು 2016-17ರಲ್ಲಿ 16,550 ಕ್ಕೆ ಇಳಿದಿದ್ದು, ಇಳಿಕೆಯ ಪ್ರಮಾಣವು 50% ಮೀರಿದೆ.

ಸಮತೋಲನವಾಗಿ ಕನ್ಸರ್ವೇಟಿವ್ ಗಳು ಭಾರತದ ಕಡೆಗೆ ಉತ್ತಮವಾದ ಒಲವನ್ನು ಹೊಂದಿದ್ದಾರೆ. ಪಿಎಂ ಕ್ಯಾಮರೂನ್ ತಮ್ಮ ಮೊದಲ ಅವಧಿಯಲ್ಲಿ (ಜುಲೈ 2010, ಫೆಬ್ರವರಿ 2013 ಮತ್ತು ನವೆಂಬರ್ 2013) ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ನವೆಂಬರ್ 2015 ರಲ್ಲಿ ವೆಂಬ್ಲಿ ಕ್ರೀಡಾಂಗಣದಲ್ಲಿ (ಲಂಡನ್) ನಡೆದ ಭಾರತೀಯ ವಲಸೆಗಾರರ ಅತಿದೊಡ್ಡ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ಅವರು ಪಿಎಂ ಮೋದಿಯವರೊಂದಿಗೆ ಹೋಗಿದ್ದರು. ಮತ್ತು ಅಂದು ಮೋದಿಯನ್ನು ಪರಿಚಯಿಸುವ ಮೊದಲು, ಬ್ರಿಟಿಷ್ ಭಾರತೀಯನೊಬ್ಬ ಒಂದು ದಿನ ಪ್ರಧಾನ ಮಂತ್ರಿಯಾಗಿ ಡೌನಿಂಗ್ ಸ್ಟ್ರೀಟ್ ಪ್ರವೇಶಿಸಬಹುದೆಂದು ನಂಬಲಸಾಧ್ಯವಾಗಿತ್ತು. ಮೋದಿ ಮತ್ತು ನಾನು ವೇದಿಕೆಯಲ್ಲಿ ತಬ್ಬಿಕೊಂಡಿರುವುದು ಭಾರತ, ಬ್ರಿಟನ್ ಜಗತ್ತನ್ನು ಸಮೀಪಿಸಿದ ಉತ್ಸಾಹದ ಸಂಕೇತವಾಗಿದೆ ಎಂದು ನಾನು ಭಾವಿಸಿದೆ ಎಂದಿದ್ದರು.

ಮತ್ತೊಂದೆಡೆ, ಲೇಬರ್ ಪಕ್ಷದ ನಾಯಕರು, ಲಾರ್ಡ್ ನಜೀರ್ ಅಹ್ಮದ್ ಪಾಕಿಸ್ತಾನ ಆಕ್ರಮಿತ-ಕಾಶ್ಮೀರದಲ್ಲಿ(ಪಿಒಕೆ) ಹುಟ್ಟಿದವರು. ಮತ-ಬ್ಯಾಂಕ್ ರಾಜಕಾರಣವನ್ನು ಅನುಸರಿಸುವಲ್ಲಿ ಭಾರತದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. 1.1 ಮಿಲಿಯನ್ ಬ್ರಿಟಿಷ್ ಪಾಕಿಸ್ತಾನಿಗಳಲ್ಲಿ, ಸುಮಾರು ಒಂದು ಮಿಲಿಯನ್ ಜನರು ಪಿಒಕೆ (ದಿ ಗಾರ್ಡಿಯನ್) ಮೂಲದವರು. ಇವರು ಅರೆ-ಸಾಕ್ಷರಸ್ಥರಾಗಿದ್ದು, ಇಂಗ್ಲಿಷ್ ಕೌಶಲ್ಯದ ಕೊರತೆಯಿಂದ ಅವರು ಸಾಮಾನ್ಯವಾಗಿ ಶ್ರಮದ ಕೆಲಸಗಳನ್ನು ಮಾಡುತ್ತಾರೆ. ಮುಖ್ಯವಾಹಿನಿಯ ಭಾಗವಾಗುವುದು ಕಷ್ಟಕರವೆಂದು ಭಾವಿಸಿ, ಅವರಲ್ಲಿ ಹೆಚ್ಚಿನವರು ತಮ್ಮದೇ ಆದ ಸಮೂಹಗಳಲ್ಲಿ ಉಳಿದುಹೋಗುತ್ತಾರೆ. ಇದು ಹಲವಾರು ಕ್ಷೇತ್ರಗಳಲ್ಲಿನ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲು ಅನುವು ಮಾಡಿಕೊಡುತ್ತದೆ.

ಇತ್ತೀಚಿನ ಉದಾಹರಣೆಯನ್ನು ಉಲ್ಲೇಖಿಸುವುದಾರೆ, ಜೆರೆಮಿ ಕಾರ್ಬಿನ್ ನೇತೃತ್ವದ ಲೇಬರ್ ಪಕ್ಷವು ಸೆಪ್ಟೆಂಬರ್ 25 ರಂದು ಕಾಶ್ಮೀರದ ವಿಷಯದ ಮೇಲೆ ಪಕ್ಷಪಾತದ ಮತ್ತು ಕಲಹಕಾರಿ ತುರ್ತು ನಿರ್ಣಯವನ್ನು ಅಂಗೀಕರಿಸಿತ್ತು. ಇದನ್ನು 100 ಕ್ಕೂ ಹೆಚ್ಚು ಬ್ರಿಟಿಷ್-ಭಾರತೀಯ ಸಂಸ್ಥೆಗಳು ಮತ್ತು ವಿದೇಶಾಂಗ ಸಚಿವಾಲಯದ ವಕ್ತಾರರು ನಿಂದಿಸಿದರು. "ಈ ಸಂದರ್ಭದಲ್ಲಿ ತೆಗೆದುಕೊಳ್ಳಲಾದ ನಿರ್ಧಾರ ಅಜ್ಞಾನದಿಂದ ಕೂಡಿದ್ದು, ಆಧಾರ ರಹಿತ ನಿರ್ಧಾರಗಳಿಗಾಗಿ ನಾವು ವಿಷಾದಿಸುತ್ತೇವೆ. ಸ್ಪಷ್ಟವಾಗಿ ಇದು ಮತ-ಬ್ಯಾಂಕ್ ಹಿತಾಸಕ್ತಿಗಳನ್ನು ಹಾಳುಮಾಡುವ ಪ್ರಯತ್ನವಾಗಿದೆ. ಲೇಬರ್ ಪಾರ್ಟಿ ಸಮ್ಮೇಳನದ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಭಾಗವಾಗಿದೆ ಎಂದು ಕಾರ್ಬಿನ್ ಪ್ರತಿಪಾದಿಸಿದ್ದರು.

ಭಾರತೀಯ ವಲಸೆಗಾರರ ಸಂಖ್ಯೆಯು ದೊಡ್ಡದಾಗಿದ್ದು (1.5 ಮಿಲಿನ್) ಹೆಚ್ಚು ಉತ್ತಮ ವಿದ್ಯಾವಂತರು ಮತ್ತು ಶ್ರೀಮಂತರನ್ನು ಹೊಂದಿದೆ. ಆದರೆ ರಾಜಕೀಯ ಪ್ರಭಾವವನ್ನು ಹೊಂದಿಲ್ಲ. ವಿಪರ್ಯಾಸವೆಂದರೆ ಅದು ಯಶಸ್ಸಿಗೆ ಅಡ್ಡಿಯಾಗಿದ್ದು, ಅವರುಗಳು ರಾಷ್ಟ್ರದಾದ್ಯಂತ ವ್ಯಾಪಕವಾಗಿ ಹರಡಿಕೊಂಡಿದ್ದಾರೆ. ಪಾಕಿಸ್ತಾನದ ವಲಸೆಗಾರರ ಆಶಯಗಳಿಗೆ ತುತ್ತಾಗುವುದು ಸುಲಭದ ಕೆಲಸವಾಗಿರಲಿಲ್ಲ. ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಲೇಬರ್ ಪಕ್ಷಕ್ಕೆ ನಿಸ್ಸಂದಿಗ್ಧ ಸಂದೇಶವನ್ನು ಕಳುಹಿಸಲಾಗಿತ್ತು.

ಮುಂಬರುವ ಚುನಾವಣೆಗಳಿಗೆ ಹಿಂತಿರುಗುವುದಾದರೆ ಹೆಚ್ಚಿನ ಅಭಿಪ್ರಾಯ ಸಂಗ್ರಹಗಳು ಕನ್ಸರ್ವೇಟಿವ್ ಪಕ್ಷದ ಉತ್ತಮ ಪ್ರದರ್ಶನವನ್ನು ಸೂಚಿಸುತ್ತಿವೆ. ಆದ್ರು ಕೂಡ ಸಾರ್ವಜನಿಕರ ಮನಸ್ಸು ಚಂಚಲವಾಗಬಹುದು. ಮತ್ತು ಈ ಮೊದಲು ಒಂದಕ್ಕಿಂತ ಹೆಚ್ಚು ಬಾರಿ ಅಭಿಪ್ರಾಯ ಸಂಗ್ರಹವು ಸಹ ತಪ್ಪಾಗಿದೆ. 2015 ರಲ್ಲಿ ಪಿಎಂ ಕ್ಯಾಮರೂನ್ ನೇತೃತ್ವದ ಕನ್ಸರ್ವೇಟಿವ್ ಪಕ್ಷಗಳು ಸೋಲುತ್ತವೆ ಎಂಬ ನಿರೀಕ್ಷೆಯಿತ್ತು. ಪ್ರಬುದ್ಧ ಮತದಾರರು ಸರಳ ಬಹುಮತವನ್ನು ಅವರಿಗೆ ಹಸ್ತಾಂತರಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಮುಂದಿನ ದಿನಗಳಲ್ಲಿ ಚುನಾವಣೆಯು ತೀವ್ರವಾಗಿ ಸ್ಪರ್ಧಾತ್ಮಕವಾಗಿರಲಿದ್ದು, ಕಠೋರವಾಗಿರುತ್ತದೆ ಎಂಬುದಂತೂ ಸತ್ಯ.

- ಸ್ಮಿತಾ ಶರ್ಮಾ, ನವದೆಹಲಿ

Intro:Body:

delhi

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.