ETV Bharat / international

ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಿದ ಆಕ್ಸ್​​ಫರ್ಡ್​ ಸಂಶೋಧಕರು: ಕ್ಲಿನಿಕಲ್​ ಟೆಸ್ಟ್ ಮಾತ್ರ ಬಾಕಿ! - ಕೋವಿಡ್-19 ಲಸಿಕೆ ಅಭಿವೃದ್ಧಿ ಪಡಿಸಿದ ಆಕ್ಸ್​​ಫರ್ಡ್​ ಸಂಶೋಧಕರು

ಸೆಪ್ಟೆಂಬರ್ ವೇಳೆಗೆ ಒಂದು ಮಿಲಿಯನ್​​ನಷ್ಟು ಸಂಭಾವ್ಯ ಕೋವಿಡ್-19 ಲಸಿಕೆ ಲಭ್ಯವಾಗಲಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಮಾಹಿತಿ ನೀಡಿದ್ದಾರೆ.

Oxford researchers aim for million potential COVID-19 vaccines
ಕೋವಿಡ್-19 ಲಸಿಕೆ ಅಭಿವೃದ್ಧಿ ಪಡಿಸಿದ ಆಕ್ಸ್​​ಫರ್ಡ್​ ಸಂಶೋಧಕರು
author img

By

Published : Apr 19, 2020, 4:58 PM IST

ಲಂಡನ್: ಕ್ಲಿನಿಕಲ್ ಪರೀಕ್ಷೆಯಲ್ಲಿ ಸಾಬೀತುಪಡಿಸುವ ಮೊದಲೇ ಈ ವರ್ಷದ ಸೆಪ್ಟೆಂಬರ್ ವೇಳೆಗೆ ಒಂದು ಮಿಲಿಯನ್​ನಷ್ಟು ಸಂಭಾವ್ಯ ಕೋವಿಡ್-19 ಲಸಿಕೆ ಲಭ್ಯವಾಗಲಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಲಸಿಕೆ ಅಭಿವೃದ್ಧಿ ಕಾರ್ಯದ ಪ್ರಮುಖ ಸಂಶೋಧಕರಾದ ಪ್ರೊಫೆಸರ್ ಸಾರಾ ಗಿಲ್ಬರ್ಟ್, 'ChAdOx1 COVID-19' ಎಂದು ಕರೆಯಲ್ಪಡುವ ಲಸಿಕೆ ಕೊರೊನಾ ವೈರಸ್ ವಿರುದ್ಧ ಕೆಲಸ ಮಾಡಬಹುದೆಂದು ನಾನು ಮತ್ತು ನಮ್ಮ ತಂಡ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿವೆ.

ಕ್ಲಿನಿಕಲ್ ಪ್ರಯೋಗ ಹಂತವು ಪ್ರಾರಂಭವಾಗುವುದಕ್ಕೆ ಮುಂಚೆಯೇ ಒಂದು ಮಿಲಿಯನ್​ನಷ್ಟು 'ChAdOx1' ಎಂಬ ಲಸಿಕೆಯನ್ನು ಈಗಾಗಲೇ ತಯಾರಿಸಲಾಗುತ್ತಿದೆ. ಈ ಲಸಿಕೆಯು ಕೊರೊನಾ ವೈರಸ್​ನಿಂದ ರಕ್ಷಿಸುತ್ತದೆಯೇ ಎಂದು ಪತ್ತೆ ಮಾಡುವುದಕ್ಕಾಗಿ 500 ಮಂದಿ ಆರೋಗ್ಯವಂತ ಸ್ವಯಂ ಸೇವಕರಿಗಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹುಡುಕಾಟ ನಡೆಸಿತ್ತು.

ಸುಮಾರು 510ಕ್ಕೂ ಹೆಚ್ಚು ಸ್ವಯಂ ಸೇವರಿಗೆ ಈ ಲಸಿಕೆ ನೀಡಿ ಪರೀಕ್ಷೆ ನಡೆಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ ಎಂದು ಹೇಳಲಾಗಿದೆ. ಈ ಪ್ರಯೋಗವನ್ನು ಇಂಗ್ಲೆಂಡ್​ನ ರೆಗ್ಯೂಲೇಟರ್​ಗಳು ಅನುಮೋದಿಸಿದ್ದಾರೆ. ಲಸಿಕೆಯನ್ನು ಸಿದ್ಧಪಡಿಸಲು ಸಂಶೋಧಕರು ಸಾಧ್ಯವಾದಷ್ಟು ಬೇಗ ಕೆಲಸ ಮಾಡುತ್ತಿದ್ದಾರೆ.

ಆಕ್ಸ್‌ಫರ್ಡ್ ತಂಡವು 2014ರಲ್ಲಿ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಎಬೋಲಾಗೆ ಲಸಿಕೆ ಕಂಡುಹಿಡಿದ ಅಸಾಧಾರಣ ಅನುಭವ ಹೊಂದಿದೆ. ಇದು ಅದಕ್ಕಿಂತಲೂ ದೊಡ್ಡ ಸವಾಲಾಗಿದೆ. ಕೋವಿಡ್-19 ವಿರುದ್ಧ ವ್ಯಾಕ್ಸಿನೇಷನ್ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಮುಂಬರುವ ಪ್ರಯೋಗವು ನಿರ್ಣಾಯಕವಾಗಿರುತ್ತದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಸಂಸ್ಥೆಯ ನಿರ್ದೇಶಕ ಪ್ರೊಫೆಸರ್ ಆಡ್ರಿಯನ್ ಹಿಲ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.