ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್): ನಮ್ಮಲ್ಲಿ ಮಕ್ಕಳು ಅತ್ತರೆ ಪೊಲೀಸರಿಗೆ ಹಿಡಿದುಕೊಡ್ತೇನೆ ಹಾಗೆ ಹೀಗೆ ಅಂತೆಲ್ಲಾ ಹೆದರಿಸಿ ಸುಮ್ಮನಾಗಿಸುತ್ತಾರೆ. ಆದರೆ, ವಿದೇಶದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಜರುಗಿದೆ. 4 ವರ್ಷದ ಮಗುವೊಂದು ಪೊಲೀಸ್ ಎಮರ್ಜೆನ್ಸಿ ನಂಬರ್ಗೆ ಕರೆ ಮಾಡಿ ಮುದ್ದಾಗಿ ಮಾತನಾಡಿದ್ದಾನೆ.
4 ವರ್ಷದ ನ್ಯೂಜಿಲ್ಯಾಂಡ್ ಮಗು ಪೊಲೀಸರಿಗೆ ಕರೆ ಮಾಡಿ ತಾವು ಬಂದು ತನ್ನ ಆಟಿಕೆಗಳನ್ನು ಪರೀಕ್ಷಿಸುವಂತೆ ಕೇಳಿದ್ದಾನೆ. ಈತನ ತುರ್ತು ಕರೆಗೆ ಸ್ಪಂದಿಸಿದ ಅಧಿಕಾರಿಗಳು ಆತನ ಮನೆಯಲ್ಲಿ ಏನೋ ಸಂಭವಿಸಿರಬಹುದು ಎಂದುಕೊಂಡು ಹೋದಾಗ ಆತ ಹೇಳಿದಂತೆ ಆಟಿಕೆಗಳನ್ನು ಪೊಲೀಸರಿಗೆ ತೋರಿಸಿದ್ದಾನೆ.
ಆತನ ಬಳಿಗೆ ಹೋದ ಪೊಲೀಸ್ ಅಧಿಕಾರಿಗಳು ಆತನ ಜೊತೆ ಫೋಟೋ ಕೂಡ ಹೊಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಗುತ್ತಿರುವ ಬಾಲಕ ಗಸ್ತು ತಿರುಗುವ ವಾಹನದ ಮೇಲೆಕೂತು ಫೋಸ್ ಕೊಟ್ಟಿದ್ದಾನೆ. ಈ ಘಟನೆ ತುರ್ತು ಸಂಖ್ಯೆಗೆ ಕರೆ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸದಿದ್ದರೂ, ಈ ಸನ್ನಿವೇಶ ತುಂಬಾ ಮುದ್ದಾಗಿದೆ.
ಇನ್ನು ಆ ಮಗು ಕರೆ ಮಾಡಿದ್ದನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಯ್ ಪೊಲೀಸ್ ಲೇಡಿ ಎಂದು ಆರಂಭಿಸುವ ಬಾಲಕ ನಾನು ನಿಮಗಾಗಿ ಕೆಲವು ಆಟಿಗೆಗಳನ್ನು ಪಡೆದಿದ್ದೇನೆ. ನೀವು ಬಂದು ಪರಿಶೀಲಿಸಿ ಎಂದು ಮುದ್ದಾಗಿ ಕರೆಯಲ್ಲಿ ತಿಳಿಸಿದ್ದಾನೆ. ಇದಕ್ಕೆ ಸ್ಪಂದಿಸಿರುವ ಪೊಲೀಸರು ಆತ ಹೇಳಿದಂತೆ ಆತನ ಮನೆಗೆ ಹೋದಾದ ಆಟಿಗೆಗಳನ್ನು ಪೊಲೀಸರಿಗೆ ತೋರಿಸಿದ್ದಾನೆ.