ವೆಲ್ಲಿಂಗ್ಟನ್(ನ್ಯೂಜಿಲ್ಯಾಂಡ್): ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಎರಡು ವರ್ಷದ ಅಧಿಕಾರವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಎರಡು ನಿಮಿಷ ವಿಡಿಯೋದಲ್ಲಿ ಸರ್ಕಾರದ ಸಾಧನೆಯನ್ನು ಬಿಚ್ಚಿಟ್ಟಿದ್ದಾರೆ.
ನ್ಯೂಜಿಲ್ಯಾಂಡ್ನ ಲೇಬರ್ ಪಾರ್ಟಿಯ ಅತ್ಯಂತ ಕಿರಿಯ ಪ್ರಧಾನಿ ಎನ್ನುವ ಹೆಗ್ಗಳಿಕೆ ಹೊಂದಿರುವ ಜೆಸಿಂಡಾಗೆ ಅವರ ತಂಡ ಸವಾಲೊಂದನ್ನು ಎಸೆದಿತ್ತು. ಎರಡು ನಿಮಿಷದಲ್ಲಿ ಎರಡು ವರ್ಷದ ಸಾಧೆನಯನ್ನು ಜೆಸಿಂಡಾ ಹೇಳಬೇಕಿತ್ತು.
- " class="align-text-top noRightClick twitterSection" data="">
ಎರಡು ವರ್ಷದಲ್ಲಿ 92,000 ಸರ್ಕಾರಿ ಉದ್ಯೋಗ, 2,200 ಮನೆಗಳ ನಿರ್ಮಾಣ, ಶೂನ್ಯ ಕಾರ್ಬನ್ ಬಿಲ್, ಜೈಲಿನಲ್ಲಿ ಕೈದಿಗಳ ಸಂಖ್ಯೆ ಇಳಿಮುಖ, ಭಯೋತ್ಪಾದನೆ ನಿಗ್ರಹಕ್ಕೆ ದಿಟ್ಟ ಕ್ರಮ ಎನ್ನುತ್ತಾ ಜೆಸಿಂಡಾ ಎರಡು ವರ್ಷದ ಸರ್ಕಾರದ ಸಾಧನೆಯನ್ನು ನಿರಂತರವಾಗಿ ಹೇಳುತ್ತಾ ಸಾಗಿದ್ದಾರೆ.
ಜೆಸಿಂಡಾ ಸರ್ಕಾರದ ಸಾಧನೆಯ ಈ ಎರಡು ನಿಮಿಷದ ವಿಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೆಸಿಂಡಾ ಸರ್ಕಾರದ ಅಭಿವೃದ್ಧಿಪರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಿಗರು ಮೆಚ್ಚುಗೆ ಸೂಚಿಸಿದ್ದಾರೆ.