ಪ್ಯಾರಿಸ್: ಫ್ರಾನ್ಸ್ನಲ್ಲಿ ಅತಿ ದೊಡ್ಡ ಏರ್ಶೋ ನಡೆಯುತ್ತಿದೆ. ವಿಶ್ವದ ಪ್ರಮುಖ ವಿಮಾನ ತಯಾರಿಕಾ ಕಂಪನಿಗಳು ಈ ಶೋನಲ್ಲಿ ಪಾಲ್ಗೊಂಡಿವೆ. ವಿಶ್ವ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ, ವಿಶ್ವ ವ್ಯಾಪಾರ ಯುದ್ಧ ಹಾಗೂ ಭಯೋತ್ಪಾದನೆಯ ಕರಿನೆರಳಿನ ಭೀತಿ ನಡುವೆ, ಹೊಸ ಹುರುಪಿನೊಂದಿಗೆ ವಿಮಾನ ತಯಾರಿಕ ಕಂಪನಿಗಳು ಶೋ ನಲ್ಲಿ ಭಾಗಿಯಾಗಿವೆ.
ಇದೇ ಮಹದಾಸೆಯೊಂದಿಗೆ ಏರ್ಬಸ್ ಶೋ ನಲ್ಲಿ ಪಾಲ್ಗೊಂಡಿದೆ. ಇನ್ನೊಂದೆಡೆ ಏರ್ಬಸ್ನ ಪ್ರತಿಸ್ಪರ್ಧಿ ಬೋಯಿಂಗ್ ಸಹ ಸಂಕಷ್ಟದಲ್ಲಿದೆ. ಈ ನಡುವೆ ಶೋನಲ್ಲಿ ವಿದ್ಯುತ್ ಚಾಲಿತ ಹಾಗೂ ಪೈಲಟ್ ರಹಿತ ವಿಮಾನಗಳನ್ನ ಪ್ರದರ್ಶಿಸಲಾಯಿತು.
ಏರ್ಬಸ್ 2035ರ ವೇಳೆಗೆ ಹೈಬ್ರಿಡ್ ಅಥವಾ ಎಲೆಕ್ಟ್ರಿಕ ಪ್ಯಾಸೆಂಜರ್ ಜೆಟ್ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಾಗಿದೆ ಎಂದು ಅದರ ಸಿಇಒ ಹೇಳಿದ್ದಾರೆ. ಇದೇ ವೇಳೆ, ಏರ್ಬಸ್ ಚಾಲಕ ರಹಿತ( ಸ್ವಯಂ ಹಾರಾಟ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸನ್ನದ್ಧವಾಗಿದೆ. ಅಷ್ಟೇ ಅಲ್ಲ ಒಬ್ಬ ಪೈಲಟ್ ಜೊತೆ ಹಾರಾಟಕ್ಕೂ ಸಿದ್ಧವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.