ETV Bharat / international

ಕೋವಿಡ್ ಚಿಕಿತ್ಸೆಯಲ್ಲಿ ಯಾವ ಔಷಧಿಗಳು ಸಹಾಯಕಾರಿ?: ಹೊಸ ಅಧ್ಯಯನದ ವರದಿ ಇಲ್ಲಿದೆ..

author img

By

Published : Jul 18, 2020, 3:38 PM IST

ಕೋವಿಡ್-19ಗೆ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದರ ಕುರಿತು ಹೊಸ ಅಧ್ಯಯನಗಳು ಹೆಚ್ಚಿನ ಮಾಹಿತಿ ನೀಡಿವೆ. ಯಾವ ಔಷಧಿ ಎಷ್ಟು ಪರಿಣಾಮಕಾರಿಯಗಿದೆ? ಎಂದು ಈ ಅಧ್ಯಯನ ವರದಿ ತಿಳಿಸುತ್ತದೆ.

medicine
medicine

ಲಂಡನ್: ವಿಶ್ವಾಸಾರ್ಹ ಫಲಿತಾಂಶಗಳನ್ನು ನೀಡುವ ಉತ್ತಮ ಗುಣಮಟ್ಟದ ವಿಧಾನಗಳೊಂದಿಗೆ ಕೋವಿಡ್-19ಗೆ ಯಾವ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂಬುದರ ಕುರಿತು ಹೊಸ ಅಧ್ಯಯನಗಳು ಹೆಚ್ಚಿನ ಮಾಹಿತಿ ನೀಡುತ್ತವೆ.

ಡೆಕ್ಸಮೆಥಾಸೊನ್ ಎಂಬ ಅಗ್ಗದ ಸ್ಟಿರಾಯ್ಡ್, ರೋಗಿ ಬದುಕುಳಿಯುವುದನ್ನು ಸುಧಾರಿಸುವ ಏಕೈಕ ಔಷಧ ಎಂದು ಬ್ರಿಟಿಷ್ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಪ್ರಕಟಿಸಿದ್ದಾರೆ.

ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೇವಲ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ ಸಹಾಯ ಮಾಡುವುದಿಲ್ಲ ಎಂದು ಇತರ ಎರಡು ಅಧ್ಯಯನಗಳು ಕಂಡುಹಿಡಿದಿವೆ.

ಕೋವಿಡ್-19 ಚಿಕಿತ್ಸೆಯ ಕುರಿತಾಗಿ ಇತ್ತೀಚಿನ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ:

ಡೆಕ್ಸಮೆಥಾಸೊನ್:

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ನೇತೃತ್ವದ ಬ್ರಿಟಿಷ್ ಅಧ್ಯಯನ ವ್ಯಾಪಕವಾಗಿ ಬಳಸಲಾಗುವ ಒಂದು ರೀತಿಯ ಸ್ಟಿರಾಯ್ಡ್ ಅನ್ನು ಪರೀಕ್ಷಿಸಿ, ಇದರ ಪರಿಣಾಮ ತೀವ್ರವಾಗಬಹುದು ಮತ್ತು ಕೋವಿಡ್-19ನ ನಂತರದ ಹಂತಗಳಲ್ಲಿ ಮಾರಕವಾಗಬಹುದು ಎಂದು ತಿಳಿಸಿದೆ.

ಔಷಧವನ್ನು ನೀಡಿದ ಸುಮಾರು 2,104 ರೋಗಿಗಳನ್ನು ಸಾಮಾನ್ಯ ಆರೈಕೆ ಪಡೆಯುವ 4,321 ರೋಗಿಗಳಿಗೆ ಹೋಲಿಸಲಾಗಿದೆ. ಉಸಿರಾಟದ ಯಂತ್ರಗಳ ಅಗತ್ಯವಿರುವ ರೋಗಿಗಳ ಸಾವನ್ನು ಇದು 36%ರಷ್ಟು ಕಡಿಮೆ ಮಾಡಿತು. ಔಷಧ ಸೇವಿಸದರೂ 29% ಜನರು ಸಾವನ್ನಪ್ಪಿದರು ಮತ್ತು 41%ರಷ್ಟು ಜನರಿಗೆ ಸಾಮಾನ್ಯ ಆರೈಕೆ ನೀಡಲಾಗಿದೆ.

ಕೇವಲ ಪೂರಕ ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ ಇದು ಸಾವಿನ ಅಪಾಯವನ್ನು 18%ರಷ್ಟು ತಡೆಯುತ್ತದೆ. ಔಷಧ ಸೇವಿಸಿದ 26%ರಷ್ಟು ಜನ ಸಾವನ್ನಪ್ಪಿದ್ದಾರೆ.

ಆರಂಭಿಕ ಅಥವಾ ಸೌಮ್ಯ ಪ್ರಕರಣಗಳಲ್ಲಿ ಇದು ಹಾನಿಕಾರಕವೆಂದು ತೋರುತ್ತದೆ. ಈ ಹಂತದಲ್ಲಿ ಔಷಧ ಸೇವಿಸಿದ 18% ಜನರು ಸಾವನ್ನಪ್ಪಿದರು ಮತ್ತು ಸಾಮಾನ್ಯ ಆರೈಕೆ ಪಡೆದ 14% ಸಾವನ್ನಪ್ಪಿದ್ದರು.

ಹೈಡ್ರಾಕ್ಸಿಕ್ಲೋರೊಕ್ವಿನ್:

ಆಕ್ಸ್‌ಫರ್ಡ್ ಅಧ್ಯಯನವು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಕಠಿಣ ರೀತಿಯಲ್ಲಿ ಪರೀಕ್ಷಿಸಿ, ಕೋವಿಡ್-19 ರೋಗಿಗಳಿಗೆ ಇದು ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

28 ದಿನಗಳ ನಂತರ, ಹೈಡ್ರಾಕ್ಸಿಕ್ಲೋರೊಕ್ವಿನ್‌ ಔಷಧಿ ಸೇವಿಸಿದ್ದ ಸುಮಾರು 25.7%ರಷ್ಟು ಜನ ಮರಣಹೊಂದಿದ್ದು, 23.5%ರಷ್ಟು ಸಾಮಾನ್ಯ ಆರೈಕೆಯಲ್ಲಿದ್ದವರು ಮರಣ ಹೊಂದಿದ್ದರು.

ಎರಡು ಇತರ ಪ್ರಯೋಗಗಳು ಈ ಔಷಧದ ಆರಂಭಿಕ ಚಿಕಿತ್ಸೆಯು ಸೌಮ್ಯ ಕೋವಿಡ್-19 ಹೊಂದಿರುವ ರೋಗಿಗಳಿಗೂ ಸಹಾಯ ಮಾಡುವುದಿಲ್ಲ ಎಂದು ಕಂಡುಹಿಡಿದಿವೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ರೋಗಲಕ್ಷಣದ ತೀವ್ರತೆಯನ್ನು ಕಡಿಮೆಗೊಳಿಸಲಿಲ್ಲ ಮತ್ತು ಹೆಚ್ಚಿನ ಅಡ್ಡ ಪರಿಣಾಮಗಳನ್ನು ತಂದಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ರೆಮೆಡೆಸಿವಿರ್:

ಕೋವಿಡ್-19 ರೋಗಿಗಳಿಗೆ ಇದೀಗ ಸಹಾಯ ಮಾಡುವ ಏಕೈಕ ಔಷಧಿ ರೆಮೆಡೆಸಿವಿರ್ ಆಂಟಿವೈರಲ್. ಇದು ಆಸ್ಪತ್ರೆಗೆ ದಾಖಲಾತಿಯನ್ನು ಸರಾಸರಿ ನಾಲ್ಕು ದಿನಗಳವರೆಗೆ ಕಡಿಮೆ ಮಾಡುತ್ತದೆ.

ತೀವ್ರವಾದ ಕೋವಿಡ್-19 ಚಿಕಿತ್ಸೆಯಲ್ಲಿ ರೆಮೆಡೆಸಿವಿರ್​ನ ಪಾತ್ರವನ್ನು ಇನ್ನಷ್ಟೇ ಕಂಡುಹಿಡಿಯಬೇಕಾಗಿದೆ. ಆದರೆ ಸೌಮ್ಯ ಲಕ್ಷಣವಿರುವ ಕೋವಿಡ್-19 ರೋಗಿಗಳಿಗೆ ಇದು ಉಪಕಾರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.