ETV Bharat / international

50 ನಿಮಿಷಗಳಲ್ಲೇ ರಿಸಲ್ಟ್​ ನೀಡುತ್ತೆ ಈ ಪೋರ್ಟಬಲ್ ಕೋವಿಡ್​-19 ಟೆಸ್ಟ್​ ಕಿಟ್​!!

author img

By

Published : Mar 26, 2020, 9:34 PM IST

ಕೊರೊನಾ ಸೋಂಕಿರುವುದನ್ನು ದೃಢಪಡಿಸಲು ಪ್ರಸ್ತುತ 24-48 ಗಂಟೆಗಳು ಬೇಕಾಗಿದ್ದು, ಇಂಗ್ಲೆಂಡ್​ನ ಸಂಶೋಧಕರು ಹೊಸದಾಗಿ ವಿನ್ಯಾಸಗೊಳಿಸಿರುವ ಪೋರ್ಟಬಲ್ ಕೋವಿಡ್​-19 ಟೆಸ್ಟ್​ ಕಿಟ್​, ಕೇವಲ 50 ನಿಮಿಷಗಳಲ್ಲಿ ಫಲಿತಾಂಶವನ್ನು ನೀಡಲಿದೆ.

portable smartphone-based coronavirus testing kit
ಪೋರ್ಟಬಲ್ ಕೊವಿಡ್​-19 ಟೆಸ್ಟ್​ ಕಿಟ್​

ಲಂಡನ್​: ಇಂಗ್ಲೆಂಡ್​ನ ಸಂಶೋಧಕರು ಹೊಸದಾಗಿ ಮೊಬೈಲ್​​ ಆಧರಿತ ಪೋರ್ಟಬಲ್ ಕೋವಿಡ್​-19 ಟೆಸ್ಟ್​ ಕಿಟ್ ಒಂದನ್ನು ವಿನ್ಯಾಸಗೊಳಿಸಿದ್ದು, ಇದು ಗಂಟಲಿನ ದ್ರಾವಣವನ್ನು ತೆಗೆದುಕೊಂಡು ಕೇವಲ 50 ನಿಮಿಷಗಳಲ್ಲಿ ಫಲಿತಾಂಶವನ್ನು ನೀಡಲಿದೆ.

ಗಂಟಲಿನ ದ್ರಾವಣದ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಿ, ಪರೀಕ್ಷಿಸಿ ಕೊರೊನಾ ಸೋಂಕಿರುವುದನ್ನು ದೃಢಪಡಿಸಲು ಪ್ರಸ್ತುತ 24-48 ಗಂಟೆಗಳು ಬೇಕಾಗಿದೆ. ಆದರೆ, ಇಂಗ್ಲೆಂಡ್​ನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ (ಯುಇಎ) ಸಂಶೋಧಕರು ವಿನ್ಯಾಸಗೊಳಿಸಿರುವ ಈ ಕಿಟ್​, ಏಕಕಾಲದಲ್ಲಿ 16 ಮಾದರಿಗಳನ್ನು ಪರೀಕ್ಷಿಸಲಿದೆ.

ಇದು ನ್ಯಾಷನಲ್​ ಹೆಲ್ತ್​ ಸರ್ವಿಸ್​ನ ಸ್ವಯಂ ನಿರ್ಬಂಧಿತ ವೈದ್ಯಕೀಯ ಸಿಬ್ಬಂದಿಗಳಿಗೆ ತ್ವರಿತವಾಗಿ ಕರ್ತವ್ಯಕ್ಕೆ ಹಾಜರಾಗಲು ಅಥವಾ ಕರ್ತವ್ಯ ನಿರತ ಸಿಬ್ಬಂದಿಗಳಿಂದ ವೈರಸ್​ ಹರಡದಂತೆ ತಡೆಗಟ್ಟಲು ಸಹಾಯವಾಗಿದೆ. ಇನ್ನು ಎರಡು ವಾರಗಳಲ್ಲಿ ಇದರ ಸೌಲಭ್ಯವನ್ನು ದೇಶಾದ್ಯಂತ ಇರುವ ಎಲ್ಲಾ ಆಸ್ಪತ್ರೆಗಳು ಪಡೆದುಕೊಳ್ಳುವಂತಾಗಬೇಕು ಎನ್ನುತ್ತಾರೆ ಸಂಶೋಧಕರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.