ಲಂಡನ್: ಬ್ರಿಟನ್ನ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಗೆಲುವು ಸಾಧಿಸುವ ಮೂಲಕ ದೇಶದ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನಿ ಪಟ್ಟಕ್ಕೇರಿರುವ ಬೋರಿಸ್ ಜಾನ್ಸನ್ ಹಾಗೂ ಭಾರತಕ್ಕೆ ಒಂದು ವಿಶೇಷ ಸಂಬಂಧವಿದೆ. ಅಸಲಿಗೆ ಬೋರಿಸ್ ಜಾನ್ಸನ್ ಭಾರತದ ಅಳಿಯ. ಹಲವರಿಗೆ ತಿಳಿಯದ ನೂತನ ಬ್ರಿಟನ್ ಪ್ರಧಾನಿಯ ಭಾರತದ ಕನೆಕ್ಷನ್ ಕುರಿತ ಮಾಹಿತಿ ಇಲ್ಲಿದೆ...
ಇಂಗ್ಲೆಂಡ್ನ ನೂತನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಆಯ್ಕೆ
ಬೋರಿಸ್ ಜಾನ್ಸನ್ 1993ರಲ್ಲಿ ಭಾರತೀಯ ಸಂಜಾತೆ ಮರಿನಾ ವ್ಹೀಲರ್ರನ್ನು ವರಿಸಿದ್ದರು. ಸುಮಾರು 25 ವರ್ಷದ ಸುಖ ದಾಂಪತ್ಯದಲ್ಲಿ ನಾಲ್ವರು ಮಕ್ಕಳನ್ನು ಪಡೆದಿದ್ದ ಈ ದಂಪತಿ 2018ರಲ್ಲಿ ಬೇರ್ಪಟ್ಟಿದ್ದರು
ಭಾರತೀಯ ಮೂಲದ ಮರಿನಾರನ್ನು ಮದುವೆಯಾದ ಬಳಿಕ ಬೋರಿಸ್ ಹಲವಾರು ಬಾರಿ ಭಾರತಕ್ಕೆ ಬಂದಿದ್ದರು. ಹೀಗಾಗಿ ಬೋರಿಸ್ ಹಾಗೂ ಭಾರತದ ಸಂಬಂಧ ದಶಕಗಳ ಹಳೆಯದು.
ಮರಿನಾ ತಾಯಿ ದೀಪ್ ಸಿಂಗ್ ಖ್ಯಾತ ಪತ್ರಕರ್ತ ಖುಷ್ವಂತ್ ಸಿಂಗ್ ಅವರ ಕಿರಿಯ ಸಹೋದರ ದಲ್ಜೀಜ್ ಸಿಂಗ್ರನ್ನು ವಿವಾಹವಾಗಿದ್ದರು.