ಕಠ್ಮಂಡು: ನೇಪಾಳ ಪ್ರಧಾನಿ ಪ್ರಧಾನಿ ಕೆ.ಪಿ. ಶರ್ಮಾ ತಮ್ಮ ಅಧಿಕಾರ ಉಳಿಸಿಕೊಳ್ಳಲು ಇದೇ ಮೇ 10 ರಂದು ಸಂಸತ್ನಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ.
ಕೆ.ಪಿ. ಶರ್ಮಾ ಒಲಿ ಶಿಫಾರಸಿನ ಮೇರೆಗೆ ಅಧ್ಯಕ್ಷೆ ಬಿಡಿಯಾ ದೇವಿ ಭಂಡಾರಿ ಸಂಸತ್ತಿನ ಅಧಿವೇಶನ ಕರೆದಿದ್ದಾರೆ. ಮೇ 10 ರಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಲೀಲಾನಾತ್ ಶ್ರೇಷ್ಠ ತಿಳಿಸಿದ್ದಾರೆ.
ನೇಪಾಳ ಸಂಸತ್ತಿನ ಕೆಳಮನೆಯಲ್ಲಿ 275 ಸದಸ್ಯರಿದ್ದು, ಇದರಲ್ಲಿ ನಾಲ್ವರು ಸದಸ್ಯರನ್ನು ಅಮಾನತು ಮಾಡಲಾಗಿದೆ. ಈ ಕಾರಣಕ್ಕೆ ಕೆ.ಪಿ. ಶರ್ಮಾ ವಿಶ್ವಾಸ ಮತದಲ್ಲಿ ಜಯ ಗಳಿಸಲು ಕನಿಷ್ಠ 136 ಮತಗಳನ್ನು ಪಡೆಯಬೇಕು.
ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಲಿ, ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
2020ರ ಡಿಸೆಂಬರ್ನಲ್ಲಿ ಪ್ರಜಾ ಪ್ರತಿನಿಧಿ ಸಭೆಯನ್ನು ವಿಸರ್ಜಿಸಿ ಪ್ರಧಾನಿ ಕೈಗೊಂಡ ನಿರ್ಧಾರದ ನಂತರ ನೇಪಾಳ ಸರ್ಕಾರ ಇಂತಹ ರಾಜಕೀಯ ಬಿಕ್ಕಟ್ಟನ್ನು ಎದುರಿಸುವಂತಾಗಿದೆ.