ಎಲ್ವಿವ್(ಉಕ್ರೇನ್) : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೊಳಿಸುವ ರಾಜತಾಂತ್ರಿಕ ಮಾರ್ಗದ ಪ್ರಯತ್ನಗಳು ಮುಂದುವರೆದಿವೆ. ಉಭಯ ರಾಷ್ಟ್ರಗಳ ನಡುವೆ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಭಾನುವಾರ ಉಕ್ರೇನ್ ಸೇನಾ ನೆಲೆಯ ಮೇಲೆ ರಷ್ಯಾದ ವಾಯುಪಡೆ ನಡೆಸಿದ ದಾಳಿಯಲ್ಲಿ ಕನಿಷ್ಠ 35 ಜನರು ಬಲಿಯಾಗಿ ಸುಮಾರು 134 ಜನರು ಗಾಯಗೊಂಡಿದ್ದಾರೆ.
ಪೋಲೆಂಡ್ ಗಡಿ ಭಾಗದಿಂದ ಕೇವಲ 25 ಕಿ.ಮೀ. ದೂರದಲ್ಲಿರುವ ಈ ಸೇನಾ ನೆಲೆ ಮೇಲಿನ ದಾಳಿ ಬೆನ್ನಲ್ಲೇ ರಷ್ಯಾ ಹಾಗೂ ಉಕ್ರೇನ್ ಸಂಧಾನ ಮಾತುಕತೆಗೆ ಮುಂದಾಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ರಷ್ಯಾ ದಾಳಿಗೆ 35 ಜನರು ಬಲಿ: ಅಮೆರಿಕದ ಪತ್ರಕರ್ತನಿಗೆ ಗುಂಡಿಟ್ಟು ಕೊಲೆ
ಇತ್ತ, ಉಕ್ರೇನ್ನಲ್ಲಿ ರಷ್ಯಾದ ಅಟ್ಟಹಾಸ ಮುಂದುವರೆದಿರುವ ಬಗ್ಗೆಯೂ ವರದಿಯಾಗುತ್ತಿದೆ. ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದ ಪರಿಣಾಮ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ಬಾಣಂತಿ ಮತ್ತು ಆಕೆಯ ಮಗು ಸಾವನ್ನಪ್ಪಿದೆ.
ಈ ನಡುವೆ ರಷ್ಯಾ ಆಕ್ರಮಣ ಖಂಡಿಸಿ ರಷ್ಯಾದ ಆರ್ಥಿಕ ಚಟುವಟಿಕೆಗಳಿಗೆ ಪೆಟ್ಟು ನೀಡುವ ನಿಟ್ಟನಲ್ಲಿ ಇತರೆ ರಾಷ್ಟ್ರಗಳು ನಿರ್ಬಂಧ ಆಸ್ತ್ರಗಳನ್ನು ಉಪಯೋಗಿಸುತ್ತಿವೆ.
ರಷ್ಯಾದ ಉದ್ಯಮಿಗಳು ಮತ್ತು ಪ್ರಮುಖ ವ್ಯಕ್ತಿಗಳು ಹಾಗೂ ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿ ಆಸ್ಟ್ರೇಲಿಯಾ ಹೆಚ್ಚಿನ ನಿರ್ಬಂಧಗಳನ್ನ ಹೇರಲು ಮುಂದಾಗಿದೆ. ರಷ್ಯಾದ 33 ಪ್ರಮುಖ ಉದ್ಯಮಿಗಳು ಮತ್ತು ಅವರ ತಕ್ಷಣದ ಕುಟುಂಬ ಸದಸ್ಯರ ಮೇಲೆ ಹೊಸ ನಿರ್ಬಂಧಗಳನ್ನು ಆಸ್ಟ್ರೇಲಿಯಾ ಪ್ರಕಟಿಸಿದೆ.
ಇದನ್ನೂ ಓದಿ: ರಷ್ಯಾ - ಉಕ್ರೇನ್ ಸಂಘರ್ಷ: ಫ್ರೆಂಚ್ ಅಧ್ಯಕ್ಷರೊಂದಿಗೆ ಬೈಡನ್ ಮಾತುಕತೆ