ಬ್ರಸೆಲ್ಸ್(ಬೆಲ್ಜಿಯಂ): 28 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದ ಐರೊಪ್ಯ ಒಕ್ಕೂಟದಿಂದ ಯುನೈಟೆಡ್ ಕಿಂಗ್ಡಮ್(ಬ್ರಿಟನ್) ನಿರ್ಗಮಿಸಿದೆ. ಬುಧವಾರ ಬ್ರಸೆಲ್ಸ್ನಲ್ಲಿರುವ ಯುರೋಪಿಯನ್ ಒಕ್ಕೂಟದ ಸಂಸತ್ತಿನಲ್ಲಿ ಬ್ರಿಟನ್ ರಾಷ್ಟ್ರವನ್ನು ಒಲ್ಲದ ಮನಸ್ಸಿನಿಂದ ಹೊರ ಕಳುಹಿಸಲಾಯಿತು.
![Mixed emotions at Brussels](https://etvbharatimages.akamaized.net/etvbharat/prod-images/5901437_bng-2.jpg)
28 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದ ಐರೊಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮನದೊಂದಿಗೆ ಒಕ್ಕೂಟದ ಸದಸ್ಯರ ಸಂಖ್ಯೆ ಕಡಿಮೆಯಾದಂತಾಗಿದೆ. ಇದು ಮುಂದಿನ ವರ್ಷಗಳಲ್ಲಿ ಕಠಿಣ ವ್ಯಾಪಾರ ಮಾತುಕತೆಗಳಿಗೂ ನಾಂದಿ ಹಾಡಿತು.
![Mixed emotions at Brussels](https://etvbharatimages.akamaized.net/etvbharat/prod-images/5901437_bkfg.jpg)
ಬ್ರಸೆಲ್ಸ್‌ನಲ್ಲಿ ನಡೆದ ಭಾವನಾತ್ಮಕ ಆವೇಶದ ಅಧಿವೇಶನದಲ್ಲಿ, ಎಲ್ಲಾ 28 ಐರೊಪ್ಯ ಒಕ್ಕೂಟ ದೇಶಗಳ ಶಾಸಕರು ತಮ್ಮ ಪ್ರೀತಿ ಮತ್ತು ದುಃಖವನ್ನು ತೋರ್ಪಡಿಸಿದರು. ಸಂಸತ್ತಿನಲ್ಲಿ ವಿದಾಯ ಗೀತೆ ಮೊಳಗಿದ ಸಂದರ್ಭದಲ್ಲಿ ಹಲವರು ಅಳುತ್ತಿದ್ದ ಸನ್ನಿವೇಶವೂ ಸೃಷ್ಟಿಯಾಗಿತ್ತು.
![Mixed emotions at Brussels](https://etvbharatimages.akamaized.net/etvbharat/prod-images/5901437_bng.jpg)
47 ವರ್ಷಗಳ ಸುದೀರ್ಘ ಸದಸ್ಯತ್ವದ ನಂತರ ಬ್ರಿಟನ್ ಐರೊಪ್ಯ ಒಕ್ಕೂಟವನ್ನು ತೊರೆಯುತ್ತಿದೆ. ಇದು ಐರೊಪ್ಯ ಒಕ್ಕೂಟ ತೊರೆದ ಮೊದಲ ದೇಶವಾಗಿದ್ದು, ಈ ಮೂಲಕ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸಂಖ್ಯೆ 27ಕ್ಕೆ ಇಳಿದಿದೆ.