ETV Bharat / international

ಪ್ರಾಣ ತೆಗೆಯಲು ಅಲ್ಲ, ಪ್ರಾಣ ರಕ್ಷಣೆಗೆ ಕಾರು ಅಪಘಾತ ಮಾಡಿಸಿದ ಚಾಲಕ: ವಿಡಿಯೋ ನೋಡಿ - car accident

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವನ ಪ್ರಾಣ ಉಳಿಸಲು ಮತ್ತೊಂದು ಕಾರಿನ ಚಾಲಕ​​ ತನ್ನ ಕಾರನ್ನೇ ತ್ಯಾಗ ಮಾಡಿದ್ದಾನೆ. ಈ ರೀತಿಯ ಘಟನೆಯೊಂದು ಯೂರೋಪಿನ ನೆದರ್‌ಲ್ಯಾಂಡ್‌ ದೇಶದಲ್ಲಿ ನಡೆಯಿತು.

Man Sacrifices His Car
Man Sacrifices His Car
author img

By

Published : Nov 22, 2021, 3:19 PM IST

Updated : Nov 22, 2021, 4:08 PM IST

ನೆದರ್‌ಲ್ಯಾಂಡ್‌​​: ರಸ್ತೆ ಅಪಘಾತ ಸಂಭವಿಸಿದಾಗ ಪ್ರಾಣ ಕಳೆದುಕೊಳ್ಳುವುದು ಅಥವಾ ಗಂಭೀರವಾದ ಗಾಯ ಸಂಭವಿಸುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ, ನಡೆದ ಎರಡು ಕಾರುಗಳ ನಡುವಿನ ಡಿಕ್ಕಿ ಓರ್ವ ಚಾಲಕನ ಪ್ರಾಣ ಉಳಿಸಿದೆ. ಅದು ಹೇಗೆ ಗೊತ್ತೇ?

ನೆದರ್‌ಲ್ಯಾಂಡ್​​​ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಕಾರು ಚಾಲನೆ​ ಮಾಡ್ತಿದ್ದ ವ್ಯಕ್ತಿಯೋರ್ವ ಪ್ರಜ್ಞಾಹೀನ ಸ್ಥಿತಿಗೆ (unconscious state) ತಲುಪಿದ್ದು, ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿದೆ. ಈ ವೇಳೆ ಅದನ್ನು ಗಮನಿಸಿರುವ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿ ಆತನ ಜೀವ ಉಳಿಸಲು ತನ್ನ ಕಾರು (Man sacrifices his car) ತ್ಯಾಗ ಮಾಡಿದ್ದಾನೆ.

ರಸ್ತೆಯಲ್ಲಿ ಕಾರು ಅಡ್ಡಾದಿಡ್ಡಿ ಚಲಿಸುವುದನ್ನು ನೋಡಿರುವ ಇನ್ನೊಂದು ಕಾರಿನ ಚಾಲಕ​​ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿ ಆ ಕಾರಿನ ಹಿಂಭಾಗಕ್ಕೆ ಗುದ್ದಿ ನಿಲ್ಲಿಸಿದ್ದಾನೆ. ಈ ವೇಳೆ ಕಾರು ನಿಂತಿದೆ. ಈ ಮುಖೇನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರು ಚಾಲಕನ ಪ್ರಾಣ ಉಳಿಸಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಸುಮಾರು 7.15 ಲಕ್ಷ ಬಾರಿ ವೀಕ್ಷಣೆಗೆ ಒಳಪಟ್ಟಿದೆ.

Last Updated : Nov 22, 2021, 4:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.