ಲಂಡನ್:ಬಹುಕೋಟಿ ವಂಚಕ ನೀರವ್ ಮೋದಿ ಎರಡನೇ ಜಾಮೀನು ಅರ್ಜಿಯ ವಿಚಾರಣೆ ಇದೀಗ ಲಂಡನ್ನ ವೆಸ್ಟ್ಮಿನಿಸ್ಟರ್ ಕೋರ್ಟ್ನಲ್ಲಿ ನಡೆದಿದ್ದು ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.
48 ವರ್ಷದ ವಜ್ರದ ವ್ಯಾಪಾರಿ ನೀರವ್ ಮೋದಿ ಬಂಧನಕ್ಕೆ ಒಳಗಾದ ತಕ್ಷಣವೇ ಜಾಮೀನಿನ ಮೊರೆ ಹೋಗಿದ್ದರು. ಆದರೆ ವೆಸ್ಟ್ಮಿನಿಸ್ಟರ್ ಕೋರ್ಟ್ ಜಾಮೀನನ್ನು ನಿರಾಕರಿಸಿತ್ತು.
London's Westminster Magistrate court rejects bail application of Nirav Modi. pic.twitter.com/JmDk0GNEnm
— ANI (@ANI) March 29, 2019 " class="align-text-top noRightClick twitterSection" data="
">London's Westminster Magistrate court rejects bail application of Nirav Modi. pic.twitter.com/JmDk0GNEnm
— ANI (@ANI) March 29, 2019London's Westminster Magistrate court rejects bail application of Nirav Modi. pic.twitter.com/JmDk0GNEnm
— ANI (@ANI) March 29, 2019
ಮುಂದಿನ ವಿಚಾರಣೆಯನ್ನು ಏಪ್ರಿಲ್ 26ಕ್ಕೆ ಕೋರ್ಟ್ ಮುಂದೂಡಿದೆ. ಲಂಡನ್ ಬ್ಯಾಂಕ್ನ ಶಾಖೆಯಲ್ಲಿ ನೀರವ್ ಮೋದಿ ಖಾತೆ ತೆರೆಯಲು ಬಂದಿದ್ದ ವೇಳೆ ಸ್ಕಾಂಟ್ಲಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದರು. ಕಳೆದ ಬುಧವಾರದಿಂದ ನೀರವ್ ಮೋದಿಯನ್ನು ಲಂಡನ್ನ ನೈಋತ್ಯ ಭಾಗದಲ್ಲಿರುವ ವಂಡ್ಸ್ವರ್ತ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ವಿಜಯ್ ಮಲ್ಯರ ಗಡಿಪಾರಿಗೆ ಆದೇಶ ನೀಡಿದ್ದ ಮುಖ್ಯ ನ್ಯಾಯಮೂರ್ತಿ ಎಮ್ಮ ಅರ್ಬರ್ಟ್ನಾಟ್ ಇಂದು ನೀರವ್ ಮೋದಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ್ದರು.