ETV Bharat / international

ಸಾವು - ಬದುಕಿನ ಹೋರಾಟದ ಮನೆಯಾದ ಇಂಗ್ಲೆಂಡ್​​​ನ ಕೇರ್​ ಹೋಂಗಳು

ಕೊರೊನಾ ವೈರಸ್‌ನಿಂದಾಗಿ ಯುನೈಟೆಡ್ ಕಿಂಗ್‌ಡಮ್ ಮೂರು ವಾರಗಳಿಗಿಂತಲೂ ಹೆಚ್ಚು ಸಮಯ ಲಾಕ್‌ಡೌನ್‌ಗೆ ಒಳಪಟ್ಟಿದೆ. ಇದು ಇಂಗ್ಲೆಂಡ್‌ನ ಉತ್ತರದಲ್ಲಿರುವ ವಸತಿ ಮತ್ತು ಆರೈಕೆ ಮನೆಯಲ್ಲಿದ್ದ 54 ನಿವಾಸಿಗಳಲ್ಲಿ 27 ಜನರು ಕೊರೊನಾಗೆ ಒಳಗಾಗಿದ್ದಾರೆ ಮತ್ತು ಅವರಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.

ಯುಕೆ ಕೇರ್​ ಹೋಂಗಳು
ಯುಕೆ ಕೇರ್​ ಹೋಂಗಳು
author img

By

Published : Apr 24, 2020, 5:55 PM IST

ಸೆಲ್​ಸ್ಟನ್: ಕೊರೊನಾ ಕಾರ್ಮೊಡ ಇಡೀ ಜಗತ್ತನ್ನೇ ಆವರಿಸಿದೆ. ಈ ಮಧ್ಯೆ ಇಂಗ್ಲೆಂಡ್​ನ ವಯೋ ವೃದ್ಧರ ಕೇರ್​ ಹೋಂಗಳು ಸಾವು - ಬದುಕಿನ ಮನೆಯಾಗಿ ಪರಿಣಮಿಸಿವೆ. ಈ ಆತಂಕದ ನಡುವೆಯೂ ಇಳಿವಯಸ್ಸಿನ ಇವರು ಸಂತೋಷ ಕೂಟಗಳ ಮೂಲಕ ದುಗುಡ ದೂರ ಮಾಡಿಕೊಳ್ಳುತ್ತಿದ್ದಾರೆ.

ಕೇರ್ ಹೋಮ್ ನಿವಾಸಿ ಡೋರಿಸ್ ಟೇಲರ್ ಕೊರೊನಾ ನಡುವೆಯೂ ತಮ್ಮ 90 ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಸಾಮಾನ್ಯವಾಗಿ, ನಾಟಿಂಗ್​ಹ್ಯಾಮ್​ಶೈರ್​​​ವ್ರೆನ್ ಹಾಲ್ ಕೇರ್ ಹೋಂನ ಎಲ್ಲ ನಿವಾಸಿಗಳು ಮತ್ತು ಸಿಬ್ಬಂದಿ ಪ್ರತಿಯೊಬ್ಬರ ಜನ್ಮದಿನವನ್ನು ಆಚರಿಸುತ್ತಾರೆ. ಕೊರೊನಾ ವೈರಸ್‌ನಿಂದಾಗಿ ಯುನೈಟೆಡ್ ಕಿಂಗ್‌ಡಮ್ ಮೂರು ವಾರಗಳಿಗಿಂತಲೂ ಹೆಚ್ಚು ಸಮಯ ಲಾಕ್‌ಡೌನ್‌ಗೆ ಒಳಪಟ್ಟಿದೆ. ಇದು ಇಂಗ್ಲೆಂಡ್‌ನ ಉತ್ತರದಲ್ಲಿರುವ ವಸತಿ ಮತ್ತು ಆರೈಕೆ ಮನೆ. ಇಲ್ಲಿನ 54 ನಿವಾಸಿಗಳಲ್ಲಿ 27 ಜನರು ಕೊರೊನಾಗೆ ಒಳಗಾಗಿದ್ದಾರೆ ಮತ್ತು ಅವರಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾದಿಂದಾಗಿ ಬ್ರಿಟನ್‌ನ 20,000 ಆರೈಕೆ ಮನೆಗಳಲ್ಲಿನ ಸಾವಿರಾರು ವೃದ್ಧರು ಸೋಂಕಿಗೀಡಾಗಿದ್ದು ಮತ್ತು ಕೆಲವರು ಸಾವನ್ನಪ್ಪಿದ್ದಾರೆ.

ಏಪ್ರಿಲ್ 10 ರವರೆಗೆ ಆರೈಕೆ ಮನೆಗಳಲ್ಲಿ ಕೊರೊನಾಗೆ 1,043 ಸಾವುಗಳು ಸಂಭವಿಸಿವೆ ಎಂದು ಬ್ರಿಟನ್‌ನ ರಾಷ್ಟ್ರೀಯ ಅಂಕಿ- ಅಂಶಗಳ ಕಚೇರಿ ಹೇಳುತ್ತದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ, ಯುಕೆ 1,38,000 ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ದೃಢಪಡಿಸಿದೆ ಮತ್ತು 18,700 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.