ಮಾಸ್ಕೋ, ರಷ್ಯಾ : ಉಕ್ರೇನ್ನಲ್ಲಿ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ರಷ್ಯಾದ ವಿಶೇಷ ಮಿಲಿಟರಿ ಕಾರ್ಯಾಚರಣೆ ವೇಳೆ ಅವುಗಳನ್ನು ಸ್ವತಃ ಉಕ್ರೇನ್ ನಾಶಪಡಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಉಕ್ರೇನ್‌ನಲ್ಲಿನರುವ ವಿಶೇಷ ಸೇನಾ ಕಾರ್ಯಾಚರಣೆಯ ವೇಳೆ ಕೆಲವು ಸತ್ಯಗಳು ಬಹಿರಂಗಗೊಳುತ್ತಿವೆ. ಉಕ್ರೇನ್ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ರಷ್ಯಾ ಕಾರ್ಯಾಚರಣೆ ವೇಳೆ ಅವುಗಳ ಪುರಾವೆಗಳನ್ನು ನಾಶಪಡಿಸಿದೆ.
ಈ ಜೈವಿಕ ಅಸ್ತ್ರಗಳನ್ನು ಉತ್ಪಾದನೆಗೆ ಅಮೆರಿಕ ರಕ್ಷಣಾ ಇಲಾಖೆ ಹಣ ಒದಗಿಸುತ್ತಿತ್ತು ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾರಿಯಾ ಜಖರೋವಾ ಹೇಳಿದರು.
ಉಕ್ರೇನ್ ಪರಮಾಣು ಸೌಲಭ್ಯಗಳನ್ನು ಕೆಲವು ದೇಶಗಳು ಬೆಂಬಲಿಸುವ ಮೂಲಕ ರಷ್ಯಾ, ಉಕ್ರೇನ್ ಮತ್ತು ಯುರೋಪಿನ ನಾಗರಿಕರಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಅವರು ಜಖರೋವಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ -ರಷ್ಯಾ ಮಧ್ಯೆ ಯುದ್ಧ: ಮಾತುಕತೆ 'ಸಕಾರಾತ್ಮಕ ಬದಲಾವಣೆ' ಕಾಣುತ್ತಿವೆ- ರಷ್ಯಾ
ಈಗ ಉಕ್ರೇನ್ ತನ್ನ ಸ್ವಂತ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸುತ್ತಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಕ್ರಮಗಳನ್ನು ಪ್ರೋತ್ಸಾಹಿಸುವ ಹಲವು ರಾಷ್ಟ್ರಗಳ ನಾಯಕರು, ಉಕ್ರೇನ್ ಮತ್ತು ರಷ್ಯಾದ ನಾಗರಿಕರಿಗೆ ಎಂದೆಂದಿಗೂ ಅಪಾಯ ಎಂದು ಮಾರಿಯಾ ಜಖರೋವಾ ಹೇಳಿದ್ದಾರೆಂದು TASS ವರದಿ ಮಾಡಿದೆ.