ETV Bharat / international

ಇಂದು ಮಾಸ್ಕೋ ಜತೆ ವಿಡಿಯೋ ಕಾನ್ಫರೆನ್ಸ್​​ ನಡೆಸಲಿರುವ ಉಕ್ರೇನ್​.. ಈಗಲಾದರೂ ಬೀಳುತ್ತಾ ಯುದ್ಧಕ್ಕೆ ಬ್ರೇಕ್​? - ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್

ರಷ್ಯಾ ಮಿಸೈಲ್​​ಗಳು ನಮ್ಮ ನೆಲಕ್ಕೆ ಬೀಳುವ ಮುನ್ನವೇ ಉಕ್ರೇನ್​​​​​​​​​​​​​​​​​​​​​​ ನೋ ಪ್ಲೈಯಿಂಗ್ ಜೋನ್​ ಎಂದು ಘೋಷಿಸಬೇಕು. ಇದಕ್ಕಾಗಿ ನಾಟೋ ಒಂದು ನಿರ್ಧಾರ ಕೈಗೊಳ್ಳಬೇಕು ಎಂದು ಉಕ್ರೇನ್​ ಅಧ್ಯಕ್ಷರು, ಯುರೋಪಿಯನ್​ ಯೂನಿಯನ್​ ಅನ್ನು ಕೋರಿಕೊಂಡಿದೆ.

ಇಂದು ಮಾಸ್ಕೋ ಜತೆ ವಿಡಿಯೋ ಕಾನ್ಫರೆನ್ಸ್​​ ನಡೆಸಲಿರುವ ಉಕ್ರೇನ್​.. ಈಗಲಾದರೂ ಬೀಳುತ್ತಾ ಯುದ್ಧಕ್ಕೆ ಬ್ರೇಕ್​?
kyiv-confirms-video-conference-talks-with-moscow
author img

By

Published : Mar 14, 2022, 7:12 AM IST

ಕೀವ್​( ಉಕ್ರೇನ್​): 19ನೇ ದಿನವೂ ಉಕ್ರೇನ್​ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಈ ನಡುವೆ ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಿಲ್ಲಿಸಲು ಮಾತುಕತೆ ಸರ್ಕಸ್​ ಮುಂದುವರಿದಿದೆ. ಮತ್ತೊಂದು ಕಡೆ ಇಂದು ಮತಹ್ವದ ಬೆಳವಣಿಗೆಯೊಂದು ನಡೆದಿದೆ. ಕೀವ್​ ಇಂದು ಮಾಸ್ಕೋದೊಂದಿಗೆ ವಿಡಿಯೋ-ಕಾನ್ಫರೆನ್ಸ್ ಮಾತುಕತೆಗಳನ್ನು ನಡೆಸಲಿದೆ. ರಷ್ಯಾ ಕಾಲಮಾನ ಬೆಳಗ್ಗೆ 10:30 ಕ್ಕೆ ಈ ಮಾತುಕತೆ ನಿಗದಿಯಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ನ್ಯಾಟೋ ಜತೆ ಝೆಲೆನ್ಸ್ಕಿ ಮಾತುಕತೆ- ಅಸಮಾಧಾನ: ಉಕ್ರೇನ್​​​​​​ ನಿಯೋಗದ ಮಾಹಿತಿ ಮೇರೆಗೆ ಎಟಿಎಫ್​ ಈ ವರದಿ ಮಾಡಿದೆ. ಈ ನಡುವೆ ಉಕ್ರೇನ್​ ಅಧ್ಯಕ್ಷರು, ನಾಟೋ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರೊಂದಿಗೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಮಾತುಕತೆ ನಡೆಸಿದರು. ಈ ವೇಳೆ, ಉಕ್ರೇನ್‌ನ ಯುರೋಪಿಯನ್ ಒಕ್ಕೂಟದ ಸದಸ್ಯತ್ವದ ಕುರಿತು ಚರ್ಚಿಸಲಾಯಿತು. ಹಾಗೂ ಯುದ್ಧ ನಿಲ್ಲಿಸುವ ಸಂಬಂಧವೂ ಸಂಧಾನ ಮಾತುಕತೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಯಿತು.

ರಷ್ಯಾ ಮಿಸೈಲ್​​ಗಳು ನಮ್ಮ ನೆಲಕ್ಕೆ ಬೀಳುವ ಮುನ್ನವೇ ಉಕ್ರೇನ್​​​​​​​​​​​​​​​​​​​​​​ ನೋ ಪ್ಲೈಯಿಂಗ್ ಜೋನ್​ ಎಂದು ಘೋಷಿಸಬೇಕು. ಇದಕ್ಕಾಗಿ ನಾಟೋ ಒಂದು ನಿರ್ಧಾರ ಕೈಗೊಳ್ಳಬೇಕು ಎಂದು ಉಕ್ರೇನ್​ ಅಧ್ಯಕ್ಷರು, ಯುರೋಪಿಯನ್​ ಯೂನಿಯನ್​ ಅನ್ನು ಕೋರಿಕೊಂಡರು.

ರಷ್ಯಾ ದಾಳಿ ಖಂಡಿಸಿದ ಅಮೆರಿಕ; ಉಕ್ರೇನ್​​​​ನಲ್ಲಿ ಅಂತಾರಾಷ್ಟ್ರೀಯ ಶಾಂತಿಪಾಲನೆ ಕೇಂದ್ರದ ಮೇಲೆ ರಷ್ಯಾ ನಡೆಸಿರುವ ದಾಳಿಯನ್ನು ಅಮೆರಿಕ ವಿದೇಶಾಂಗ ಸಚಿವರು ಖಂಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಂಟೋನಿ ಬ್ಲಿಂಕನ್​​, ಪೋಲೆಂಡ್​​​ ಗಡಿಗೆ ಸಮೀಪವಿರುವ ಯಾವೊರಿವ್‌ನಲ್ಲಿರುವ ಶಾಂತಿಪಾಲನೆ ಮತ್ತು ಭದ್ರತೆಗಾಗಿ ಇರುವ ಅಂತಾರಾಷ್ಟ್ರೀಯ ಕೇಂದ್ರದ ಮೇಲೆ ರಷ್ಯಾ ನಡೆಸಿರುವ ಕ್ಷಿಪಣಿ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಕ್ರೌರ್ಯ ನಿಲ್ಲಬೇಕು ರಷ್ಯಾ ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.

ನಮ್ಮ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕುವಂತೆ ನಾವು ಕೇಳುವುದಿಲ್ಲ; ರಷ್ಯಾ- ಪಾಶ್ಚಿಮಾತ್ಯ ಮತ್ತು ಪ್ರಪಂಚದ ಇತರ ರಾಷ್ಟ್ರಗಳು ನಮ್ಮ ಮೇಲೆ ಹಾಕಿರುವ ಒತ್ತಡಗಳಿಂದ ರಷ್ಯಾದ ಯಾವುದೇ ನಿರ್ಧಾರಗಳು ಬದಲಾಗುವುದಿಲ್ಲ ಮತ್ತು ಬದಲಾಯಿಸಲು ಸಾಧ್ಯವಿಲ್ಲ. ಇನ್ನು ಮೇಲಿನ ಯಾವುದೇ ನಿರ್ಬಂಧಗಳನ್ನು ತೆಗೆದುಹಾಕುವಂತೆ ಅಮೆರಿಕ ಹಾಗೂ ಇತರ ರಾಷ್ಟ್ರಗಳನ್ನು ನಾವು ಯಾವುದೇ ಕಾರಣಕ್ಕೂ ಕೇಳುವುದಿಲ್ಲ ಎಂದು ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆ ವರ್ಶಿನಿನ್ ಹೇಳಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

ಇದನ್ನು ಓದಿ:ಉಕ್ರೇನ್​ನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬ್ರೆಂಟ್‌ ರೆನೌಡ್‌ ಹತ್ಯೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.