ಜಿನೆವಾ: ಬಹಾಮಾಸ್‌ನ ವಿಶ್ವಸಂಸ್ಥೆ ಕಾಯಂ ಪ್ರತಿನಿಧಿ ಕೆವಾ ಬೈನ್ 73 ನೇ ವಿಶ್ವ ಆರೋಗ್ಯ ಸಭೆ (ಡಬ್ಲ್ಯುಹೆಚ್‌ಎ)ಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಡಬ್ಲ್ಯುಎಚ್‌ಒ, 73 ನೇ ವಿಶ್ವ ಆರೋಗ್ಯ ಸಭೆಯ ಅಧ್ಯಕ್ಷರಾಗಿ ಯುಎನ್‌ಗೆ ಬಹಾಮಾಸ್‌ನ ಕಾಯಂ ಪ್ರತಿನಿಧಿಯಾಗಿರುವ ಕೆವಾ ಬೈನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದಿದೆ. ವಿಶ್ವ ಆರೋಗ್ಯ ಸಭೆಯಲ್ಲಿ (ಡಬ್ಲ್ಯುಹೆಚ್‌ಎ) ಡಬ್ಲ್ಯೂ ಹೆಚ್ಓ ಸಂಬಂಧಿತ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಪ್ರಸ್ತುತ ಕೊರೊನಾ ವೈರಸ್ ಜಗತ್ತನ್ನು ಆವರಿಸಿರುವ ಹಿನ್ನೆಲೆ ಈ ಸಭೆ ಮಹತ್ವ ಪಡೆದುಕೊಂಡಿದೆ.
-
The #WHA73 have elected Ms Keva Bain, Permanent Representative of the #Bahamas🇧🇸 to the UN in Geneva as the President of the 73rd World Health Assembly.
— World Health Organization (WHO) (@WHO) May 18, 2020 " class="align-text-top noRightClick twitterSection" data="
">The #WHA73 have elected Ms Keva Bain, Permanent Representative of the #Bahamas🇧🇸 to the UN in Geneva as the President of the 73rd World Health Assembly.
— World Health Organization (WHO) (@WHO) May 18, 2020The #WHA73 have elected Ms Keva Bain, Permanent Representative of the #Bahamas🇧🇸 to the UN in Geneva as the President of the 73rd World Health Assembly.
— World Health Organization (WHO) (@WHO) May 18, 2020
ಆಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಕೆವಾ ಬೈನ್, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ಧಾರ ಅಚಲವಾಗಿರಬೇಕು. ಜನರ ಜೀವ ಕಾಪಾಡುವ ನಿಟ್ಟಿನಲ್ಲಿ ಅದನ್ನು ಸರಿದೂಗಿಸಿಕೊಂಡು ಹೋಗಬೇಕು ಎಂದಿದ್ದಾರೆ.