ETV Bharat / international

ಇಟಲಿಯಲ್ಲಿ ಕೊರೊನಾದಿಂದ 2 ತಿಂಗಳಲ್ಲಿ 25 ಸಾವಿರ ಬಲಿ, ಗುಣಮುಖರ ಸಂಖ್ಯೆಯಲ್ಲಿ ಗಣನೀಯ ಏರಿಕೆ

author img

By

Published : Apr 23, 2020, 12:12 PM IST

ಮಾ.10 ರಿಂದ ರಾಷ್ಟ್ರಾದ್ಯಂತ ಲಾಕ್​ಡೌನ್​ ಮಾಡಲಾಗಿರುವ ಇಟಲಿಯಲ್ಲಿ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಆ್ಯಕ್ಟಿವ್ ಕೇಸ್​ಗಳ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು, ಗುಣಮುಖರ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

Italy's coronavirus deaths exceed 25,000
ಇಟಲಿಯಲ್ಲಿ ಕೊರೊನಾ ಬಿಕ್ಕಟ್ಟು

ರೋಮ್​: ಸಂಪೂರ್ಣ ಲಾಕ್​ಡೌನ್​ ಆಗಿರುವ ಇಟಲಿ, ಕೋವಿಡ್​-19ಗೆ ತತ್ತರಿಸಿ ಹೋಗಿದೆ. ದೇಶದಲ್ಲಿ ಫೆ.21 ರಂದು ಮೊದಲ ಪ್ರಕರಣ ಪತ್ತೆಯಾಗಿದ್ದು, ಇದೀಗ ಎರಡು ತಿಂಗಳಲ್ಲಿ ಸೋಂಕಿತರ ಸಂಖ್ಯೆ 1,87,327ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾಗೆ 25,085 ಮಂದಿ ಬಲಿಯಾಗಿದ್ದಾರೆ.

ಆದರೆ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಆ್ಯಕ್ಟಿವ್ ಕೇಸ್​ಗಳ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು, ಗುಣಮುಖರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬುಧವಾರ ಒಂದೇ ದಿನ 2,943 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಚ್​ ಆಗಿದ್ದು, ಗುಣಮುಖರ ಸಂಖ್ಯೆ 54,543ಕ್ಕೆ ಏರಿಕೆಯಾಗಿದೆ. ಒಟ್ಟು ಪ್ರಕರಣಗಳ ಪೈಕಿ 1,07,699 ಕೇಸ್​ಗಳು ಆ್ಯಕ್ಟಿವ್​ ಇವೆ. ಇವುಗಳಲ್ಲಿ 2,384 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದು (ICU), 23,805 ಆಸ್ಪತ್ರೆಯ ಜನರಲ್​ ವಾರ್ಡ್​ಗಳಲ್ಲಿದ್ದಾರೆ. ಉಳಿದ ಶೇ.75.7 ರಷ್ಟು ಸೋಂಕಿತರು ಮನೆಗಳಲ್ಲಿ ಐಸೋಲೇಷನ್​ನಲ್ಲಿದ್ದಾರೆ.

ಇನ್ನು ಕಳೆದ 24 ಗಂಟೆಗಳಲ್ಲಿ ಮತ್ತಿಬ್ಬರು ವೈದ್ಯರು ಕೊರೊನಾ ವಿರುದ್ಧದ ಹೋರಾಟದಲ್ಲಿ ಮೃತಪಟ್ಟಿದ್ದು, ದೇಶದಲ್ಲಿ ಒಟ್ಟು 144 ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶಸ್ತ್ರಚಿಕಿತ್ಸಕರು ಮತ್ತು ದಂತವೈದ್ಯರ ರಾಷ್ಟ್ರೀಯ ಒಕ್ಕೂಟ ಮಾಹಿತಿ ನೀಡಿದೆ.

ಇಟಲಿಯಲ್ಲಿ ಮಾ.10 ರಿಂದ ರಾಷ್ಟ್ರಾದ್ಯಂತ ಲಾಕ್​ಡೌನ್​ ಮಾಡಲಾಗಿದ್ದು, ಮೇ 3ರ ವರೆಗೆ ಮುಂದುವರೆಯಲಿದೆ. ಬಳಿಕ ಎರಡನೇ ಹಂತದ ಲಾಕ್​ಡೌನ್​ ಅನ್ನು ಘೋಷಿಸಲಿದ್ದು, ಆ ವೇಳೆ ಕೆಲ ಉತ್ಪಾದಕ ಚಟುವಟಿಕೆಗಳು ಪುನರಾರಂಭಗೊಳ್ಳಲಿದೆ ಎಂದು ಇಟಾಲಿಯನ್​ ಸರ್ಕಾರ ತಿಳಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.