ರೋಮ್(ಇಟಲಿ): ಕೊರೊನಾ ಸೋಂಕಿನಿಂದಾಗಿ ಇಟಲಿಯಲ್ಲಿ ಬುಧವಾರ ಒಂದೇ ದಿನ 475 ಜನ ಸಾವಿಗೀಡಾಗಿದ್ದಾರೆ. ಕಳೆದ ವರ್ಷ ಸೋಂಕು ಪತ್ತೆಯಾದಾಗಿನಿಂದ ಒಂದು ದೇಶದಲ್ಲಿ 24 ಗಂಟೆಗಳಲ್ಲಿ ಸಂಭವಿಸಿದ ಅತಿ ಹೆಚ್ಚು ಸಾವಿನ ಪ್ರಮಾಣವಿದು!
ಯೂರೋಪ್ ಖಂಡದಲ್ಲಿ ಬರುವ ಇಟಲಿಯಲ್ಲಿ ಒಟ್ಟು ಸಾವಿನ ಸಂಖ್ಯೆ 2,978ಕ್ಕೆ ತಲುಪಿದೆ. ಸೋಂಕಿತರ ಸಂಖ್ಯೆ 35,713ಕ್ಕೆ ಏರಿಕೆಯಾಗಿದೆ. ಈ ಹಿಂದೆ ಅಂದರೆ ಕಳೆದ ಭಾನುವಾರದಂದು ಇಟಲಿಯಲ್ಲಿ 368 ಸಾವು ಸಂಭವಿಸಿತ್ತು. ಇದು ಅಲ್ಲಿಯವರೆಗೆ ದಾಖಲಾಗಿದ್ದ ಅತೀ ಹೆಚ್ಚು ಸಾವಿನ ಸಂಖ್ಯೆಯಾಗಿತ್ತು.
6 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರವು ಈಗ ವಿಶ್ವದಾದ್ಯಂತ ಕೊವಿಡ್ ದಾಳಿಗೆ ತತ್ತರಿಸಿದ್ದು, ಜಗತ್ತಿನಾದ್ಯಂತ ಸಂಭವಿಸಿದ ಒಟ್ಟು ಸಾವುಗಳ ಪ್ರಮಾಣದಲ್ಲಿ ಶೇ.34.2 ರಷ್ಟು ಪಾಲು ತನ್ನದಾಗಿಸಿದೆ.
ಮಾರ್ಚ್ 25ರ ವರೆಗೂ ಇಟಲಿಯಲ್ಲಿ ವ್ಯಾಪಾರ, ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ಒಂದಡೆ ಗುಂಪು ಸೇರುವುದನ್ನು ಈಗಾಗಲೇ ನಿಷೇಧಿಸಲಾಗಿದೆ. ಏಪ್ರಿಲ್ 3ರ ವರೆಗೂ ಶಾಲಾ, ಕಾಲೇಜು ಮತ್ತು ಕ್ರೀಡಾಕೂಟಗಳನ್ನು ಸ್ಥಗಿತಗೊಳಿಸಲಾಗಿದೆ. ಬಂದ್ ಮಾಡಲಾಗಿದೆ.