ಜಿನೀವಾ(ಇಟಲಿ): ವ್ಯಾಪಕ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಲು ಪ್ರಯತ್ನಿಸುವ ಸಲುವಾಗಿ ಇಟಲಿಯ ಪ್ರಧಾನಿ ಗಿಸೆಪ್ಪೆ ಕಾಂಟೆ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕೃತವಾಗಿ ಅಧಿಕಾರದಿಂದ ಕೆಳಗಿಳಿದಿದ್ದಾರೆ.
ಇಟಲಿಯ ಅಧ್ಯಕ್ಷರ ಭವನದ ಅಧಿಕೃತ ಹೇಳಿಕೆಯ ಪ್ರಕಾರ ಬುಧವಾರ ಮಧ್ಯಾಹ್ನದಿಂದ ಹೊಸ ಸಂಸತ್ತಿನಲ್ಲಿ ಬಹುಮತದ ಉದ್ದೇಶದಿಂದ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ.
ಇದನ್ನೂ ಓದಿ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ ನಿರ್ಧಾರ ಇಂದು ಪ್ರಕಟ!
ಇಟಲಿಯ ಅಧ್ಯಕ್ಷ ಸೆರ್ಗಿಯೋ ಮ್ಯಾಟರೆಲ್ಲಾ ಬೆಳಗ್ಗೆ ಗಿಸೆಪ್ಪೆ ಕಾಂಟೆ ಅವರಿಂದ ರಾಜೀನಾಮೆ ಸ್ವೀಕರಿಸಿದರು. ಈಗ ಮತ್ತೆ ಸರ್ಕಾರದ ಉಸ್ತುವಾರಿ ವಹಿಸುವ ಸಲುವಾಗಿ ಪಕ್ಷಗಳನ್ನು ಆಹ್ವಾನಿಸಲಿದ್ದು, ಬಹುಮತ ಇರುವ ಪಕ್ಷ ಸರ್ಕಾರ ರಚಿಸುತ್ತದೆ.
ಜನವರಿ 27ರ ಬುಧವಾರ ಈ ಕುರಿತು ಸಭೆಗಳು ಪ್ರಾರಂಭವಾಗಲಿವೆ ಎಂದು ಇಟಲಿ ಅಧ್ಯಕ್ಷರ ಕಾರ್ಯದರ್ಶಿ ಉಗೊ ಜಂಪೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.