ಜೆರುಸಲೇಂ(ಇಸ್ರೇಲ್): ಅಮೆರಿಕ ಮತ್ತು ರಷ್ಯಾದ ತಿಕ್ಕಾಟದ ನಡುವೆ ಉಕ್ರೇನ್ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ರಾಷ್ಟ್ರವು ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳಿಗೆ ದೇಶ ತೊರೆಯುವಂತೆ ಒತ್ತಾಯಿಸಿದ್ದು, ಉಕ್ರೇನ್ಗೆ ಪ್ರಯಾಣ ಬೆಳೆಸುವವರಿಗೆ ಎಚ್ಚರಿಕೆಯನ್ನೂ ನೀಡುತ್ತಿದೆ.
ಉಕ್ರೇನ್‌ನಲ್ಲಿರುವ ಇಸ್ರೇಲಿ ಪ್ರಜೆಗಳ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರನ್ನು ತಮ್ಮ ದೇಶಕ್ಕೆ ಕರೆತರಲು ತಯಾರಿ ನಡೆಸುವ ಸಲುವಾಗಿ ಕಾನ್ಸುಲರ್ ವಿಭಾಗದಲ್ಲಿ ನೋಂದಾಯಿಸಲು ತನ್ನ ಪ್ರಜೆಗಳಿಗೆ ಇಸ್ರೇಲ್ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಮಾತನಾಡಿರುವ ಇಸ್ರೇಲ್‌ನ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್, ಇಸ್ರೇಲ್ ಪ್ರಜೆಗಳ ಕರೆತರುವ ವಿಚಾರದಲ್ಲಿ ಸೇನೆ ಸಹಕರಿಸುವಂತೆ ಆದೇಶಿಸಿದ್ದಾರೆ. ಇಸ್ರೇಲ್ ಈಗಾಗಲೇ ಉಕ್ರೇನ್ನ ರಾಜಧಾನಿ ಕೀವ್‌ನಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿನ ರಾಜತಾಂತ್ರಿಕರು ಮತ್ತು ಇಸ್ರೇಲಿ ಸಿಬ್ಬಂದಿಯ ಕುಟುಂಬ ಸದಸ್ಯರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ.
ಇದನ್ನೂ ಓದಿ: ಉಕ್ರೇನ್ ಉದ್ವಿಗ್ನತೆ: ಪುಟಿನ್ಗೆ ಕರೆ ಮಾಡಿ ಎಚ್ಚರಿಕೆ ನೀಡಿದ ಜೋ ಬೈಡನ್