ಕೈವ್(ಉಕ್ರೇನ್) : ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯುದ್ಧ ಆರಂಭವಾಗುತ್ತಿದ್ದಂತೆಯೇ ಉಕ್ರೇನ್‌ನಲ್ಲಿ ಸಿಲುಕಿರುವ ಸುಮಾರು 20 ಸಾವಿರ ಮಂದಿ ಭಾರತೀಯರು ತಮ್ಮ ದೇಶಕ್ಕೆ ಮರಳಲಾಗದೆ, ಅಲ್ಲಿಯೂ ಇರಲಾಗದೆ ಒದ್ದಾಡುತ್ತಿದ್ದಾರೆ. ವಾಯು ಮಾರ್ಗಗಳು ಸ್ಥಗಿತಗೊಂಡಿರುವ ಕಾರಣ ಭಾರತ ಸರ್ಕಾರಕ್ಕೆ ಇವರನ್ನು ಕರೆತರುವುದು ಕಷ್ಟಸಾಧ್ಯವಾಗಿದೆ.
ಅನ್ನ-ನೀರು ಇಲ್ಲದೇ ಪ್ರಾಣರಕ್ಷಣೆಗಾಗಿ ಮೆಟ್ರೋ ನಿಲ್ದಾಣಗಳ ಸುರಂಗಗಳಲ್ಲಿ, ನೆಲಮಾಳಿಗೆ ಹಾಗೂ ಬಂಕರ್ಗಳಲ್ಲಿ ಭಾರತೀಯರು ದಿನಗಳನ್ನು ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ವಿಡಿಯೋ ಸಂದೇಶ ಕಳುಹಿಸುವ ಮೂಲಕ ಭಾರತ ಸರ್ಕಾರವನ್ನು ಮನವಿ ಮಾಡುತ್ತಿದ್ದಾರೆ. 'ನಮ್ಮನ್ನು ರಕ್ಷಿಸಿ' ಎಂದು ಬೇಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಮರ: ಯುರೋಪಿಯನ್ ರಾಷ್ಟ್ರಗಳ ಸಹಾಯಕ್ಕೆ ಮನವಿ ಮಾಡಿದ ಉಕ್ರೇನ್ ಅಧ್ಯಕ್ಷ
ರಾಯಭಾರ ಕಚೇರಿಯಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಕೂಡ ಆರೋಪಿಸುತ್ತಿದ್ದಾರೆ. ಯಾವ ಸಮಯದಲ್ಲಾದರೂ ಬಾಂಬ್ ಸ್ಫೋಟಗೊಳ್ಳಬಹುದು, ಶೆಲ್ ದಾಳಿ ನಡೆಯಬಹುದು ಎಂಬ ಭಯದಲ್ಲಿದ್ದಾರೆ.