ಕೀವ್(ಉಕ್ರೇನ್): ಉಕ್ರೇನ್-ರಷ್ಯಾ ನಡುವಿನ ಸಂಘರ್ಷದಿಂದಾಗಿ ಭಾರತೀಯ ವಿದ್ಯಾರ್ಥಿಗಳು ಸೇರಿ ನೂರಾರು ನಾಗರಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇದರ ಮಧ್ಯೆ ಕೆಲವರು ತಮ್ಮ ಪ್ರೀತಿಯ ಸಾಕು ಪ್ರಾಣಿಗಳನ್ನು ಬಿಟ್ಟು ಬರಲೊಲ್ಲೆವು ಎನ್ನುತ್ತಿದ್ದಾರೆ.
ಉಕ್ರೇನ್ನ ಪೂರ್ವ ಭಾಗವಾದ ಡಾನ್ಬಸ್ನ ಸೆವೆರೊಡೆನೆಸ್ಕ್ ಪಟ್ಟಣದಲ್ಲಿ ಕಳೆದ ಏಳು ವರ್ಷಗಳಿಂದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ವೈದ್ಯ ಗಿರಿಕುಮಾರ್ ಪಾಟೀಲ್ ವಾಸವಾಗಿದ್ದು, ಅವರು ತಮ್ಮೊಂದಿಗೆ ಜಾಗ್ವಾರ್-ಫ್ಯಾಂಥರ್ ಸಾಕಿಕೊಂಡಿದ್ದಾರೆ. ಇದೀಗ ಉಕ್ರೇನ್ನಿಂದ ಅವುಗಳನ್ನು ಬಿಟ್ಟು ವಾಪಸ್ ಬರಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ: ವಿಶ್ವ ಮಹಿಳಾ ದಿನ ವಿಶೇಷ: ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ 16 ಕಿಲೋ ಮೀಟರ್ ಕ್ರಮಿಸುವ ಶಿಕ್ಷಕಿ
ಇವರು ಕಳೆದ ಒಂದು ವಾರದಿಂದ ನೆಲಮಾಳಿಗೆಯಲ್ಲಿ ಪ್ಯಾಂಥರ್ ಹಾಗೂ ಜಾಗ್ವಾರ್ನೊಂದಿಗೆ ಸಿಲುಕಿಕೊಂಡಿದ್ದು, ಅವುಗಳನ್ನು ಬಿಟ್ಟು ತಾವು ಭಾರತಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. 2007ರಲ್ಲಿ ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್ಗೆ ತೆರಳಿದ್ದ ಗಿರಿಕುಮಾರ್ ವೈದ್ಯ ಪದವಿ ನಂತರ ಮೂಳೆ ತಜ್ಞರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗ ಪಡೆದುಕೊಂಡಿದ್ದು, ಅಲ್ಲೇ ವಾಸವಾಗಿದ್ದಾರೆ. ಇದೀಗ ಸರ್ಕಾರಿ ಆಸ್ಪತ್ರೆ ಬಂದ್ ಆಗಿದ್ದು, ಮನೆಯಲ್ಲಿ ಸಿಲುಕಿಕೊಂಡಿದ್ದಾರೆ. ಭಾರತೀಯ ರಾಯಭಾರ ಕಚೇರಿ ಜೊತೆ ಮಾತನಾಡಿದ್ರೂ ನನಗೆ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದಿರುವ ಗಿರಿಕುಮಾರ್, ರಷ್ಯಾ ಮಿಲಿಟರಿ ಪಡೆ ಈಗಾಗಲೇ ತಾನು ವಾಸವಾಗಿರುವ ಸ್ಥಳವನ್ನು ಸಂಪೂರ್ಣವಾಗಿ ಸುತ್ತುವರೆದಿದೆ ಎಂದಿದ್ದಾರೆ.
ನನ್ನ ಪ್ರಾಣ ಉಳಿಸಿಕೊಳ್ಳಲು ಸಾಕುಪ್ರಾಣಿಗಳನ್ನು ಬಿಟ್ಟು ಬರಲು ಸಾಧ್ಯವೇ ಇಲ್ಲ. ಅವು ನನಗೆ ಮಕ್ಕಳಿದ್ದಂತೆ. ನನ್ನ ಕೊನೆಯುಸಿರು ಇರುವವರೆಗೂ ಅವುಗಳ ರಕ್ಷಣೆಯಲ್ಲೇ ಇರುತ್ತೇನೆಂದು ಶಪಥ ಮಾಡಿದ್ದಾರೆ.