ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರತ ಹಾಗೂ ಫ್ರಾನ್ಸ್‌ನ ನೌಕಾ ಸೇನೆಗಳು ಸಮರಾಭ್ಯಾಸ ನಡೆಸಲಿವೆ. ಅತ್ಯಾಧುನಿಕ ನೌಕೆಗಳು, ಸಬ್ ಮರೀನ್‌ಗಳಿಗೆ ಗುರಿ ಇಡುವಂತ ನೌಕೆಗಳು ಅಭ್ಯಾಸ ಮಾಡಲಿವೆ. ಇದು ಉಭಯ ದೇಶಗಳ ನಡುವಿನ ಒಗ್ಗಟ್ಟು, ಸಹಕಾರ, ಪರಸ್ಪರ ಕಾರ್ಯಸಾಧ್ಯತೆಗಳಿಗೆ ಅನುಕೂಲವಾಗಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಭಾರತದ ನೌಕಾ ದಳದ ಬತ್ತಳಿಕೆಯಲ್ಲಿರುವ ಮಾರ್ಗದರ್ಶಿ-ಕ್ಷಿಪಣಿ ರಹಸ್ಯ ನಾಶಕ 'ಕೋಲ್ಕತ್ತ', ಮಾರ್ಗದರ್ಶಿ-ಕ್ಷಿಪಣಿ ಯುದ್ಧ ನೌಕೆ ತರ್ಕಶ್ ಮತ್ತು ತಲ್ವಾರ್, ದೀಪಕ್ ಹಡಗು, ಕಲ್ವಾರಿ ಕ್ಲಾಸ್ ಸಬ್ ಮರೀನ್ ಹಾಗೂ ಏರ್‌ಕ್ರಾಫ್ಟ್‌ಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಲಿವೆ. ಆಡ್ಮಿರಲ್ ಅಜಯ್ ಕೊಚ್ಚಾರ್ ಮುಂದಾಳ್ವತದಲ್ಲಿ ನೌಕೆಗಳು ತಾಲೀಮು ನಡೆಸಲಿವೆ.
ಇದನ್ನೂ ಓದಿ: ಹ್ಯಾಟ್ರಿಕ್ ಸೋಲಿನ ಭೀತಿಯಿಂದ ಪಾರಾದ ಆರ್‌ಆರ್; ಕೆಕೆಆರ್ ವಿರುದ್ಧ 6 ವಿಕೆಟ್‌ಗಳ ಜಯ
ಇನ್ನು, ಫ್ರಾನ್ಸ್‌ನ ಯುದ್ಧ ವಿಮಾನಗಳನ್ನು ಚಾರ್ಲ್ಸ್-ಡಿ-ಗೌಲ್ ಮುನ್ನಡೆಸುತ್ತಿದ್ದು, ರಫೇಲ್ -ಎಂ ಯುದ್ಧ ಜೆಟ್‌ಗಳು, ಇ2ಸಿ ಹಾಕೀ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳಾದ ಚೈಮನ್ ಎಂ ಮತ್ತು ಹೌಫಿನ್ ಭಾಗವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.