ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡುವ ಆಪರೇಷನ್ ಗಂಗಾ ಕಾರ್ಯಾಚರಣೆಯಡಿ 218 ಭಾರತೀಯರಿದ್ದ 9ನೇ ವಿಮಾನ ಬುಕಾರೆಸ್ಟ್‌ನಿಂದ ದೆಹಲಿಗೆ ಮಂಗಳವಾರ ಬೆಳಗ್ಗೆ ಬಂದಿಳಿದಿದೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಬೆಳಗ್ಗೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರಜೆಗಳನ್ನು ಸ್ವಾಗತಿಸಿದರು. ಉಕ್ರೇನ್‌ನಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಇದಕ್ಕೂ ಮುನ್ನ ಬುಕಾರೆಸ್ಟ್‌ನಿಂದ 182 ಭಾರತೀಯ ಪ್ರಜೆಗಳನ್ನು ಹೊತ್ತು ತಂದ ಮತ್ತೊಂದು ವಿಮಾನ ಮುಂಬೈ ನಿಲ್ದಾಣಕ್ಕೆ ಬಂದಿಳಿದಿದೆ. ಅಂದಾಜಿನ ಪ್ರಕಾರ, ಸುಮಾರು 18,000 ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದಾರೆ.
-
#OperationGanga developments.
— Dr. S. Jaishankar (@DrSJaishankar) March 2, 2022 " class="align-text-top noRightClick twitterSection" data="
Six flights have now departed for India in the last 24 hours. Includes the first flights from Poland.
Carried back 1377 more Indian nationals from Ukraine.
">#OperationGanga developments.
— Dr. S. Jaishankar (@DrSJaishankar) March 2, 2022
Six flights have now departed for India in the last 24 hours. Includes the first flights from Poland.
Carried back 1377 more Indian nationals from Ukraine.#OperationGanga developments.
— Dr. S. Jaishankar (@DrSJaishankar) March 2, 2022
Six flights have now departed for India in the last 24 hours. Includes the first flights from Poland.
Carried back 1377 more Indian nationals from Ukraine.
6 ವಿಮಾನಗಳಲ್ಲಿ 1377 ಜನ: 24 ಗಂಟೆ ಅವಧಿಯಲ್ಲಿ 6 ವಿಮಾನಗಳು ಪೋಲೆಂಡ್, ರೊಮೇನಿಯಾ ಸೇರಿದಂತೆ ವಿವಿಧೆಡೆಯಿಂದ ಹಾರಾಟ ನಡೆಸಿ 1377 ಭಾರತೀಯರನ್ನು ಹೊತ್ತು ತರುತ್ತಿವೆ. ಇದರಲ್ಲಿ ಪೋಲೆಂಡ್ನಿಂದ ಮೊದಲ ವಿಮಾನ ಭಾರತೀಯರನ್ನು ಟೇಕ್ಆಫ್ ಮಾಡಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಓದಿ: ನಮಗೆ ಯಾರೂ ಸಹಾಯ ಮಾಡ್ತಿಲ್ಲ.. ಉಕ್ರೇನ್ನಲ್ಲಿರುವ ವಿದ್ಯಾರ್ಥಿನಿಯ ವಿಡಿಯೋ ವೈರಲ್