ETV Bharat / international

ವಿನಾಶಕಾರಿ ಜೈವಿಕಾಸ್ತ್ರಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಭಾರತದ ಬೆಂಬಲ - ಜಾಗತಿಕ ಮತ್ತು ತಾರತಮ್ಯರಹಿತ ನಿಶಸ್ತ್ರೀಕರಣ ಸಮಾವೇಶ

ಎಲ್ಲ ರಾಷ್ಟ್ರಗಳು ಬಿಟಿಡಬ್ಲೂಸಿಯನ್ನು ಪರಿಣಾಮಕಾರಿಯಾಗಿ ಅಕ್ಷರಶಃ ಅನುಷ್ಠಾನಗೊಳಿಸುವುದು ಪ್ರಮುಖವಾಗಿದೆ. ಬಿಟಿಡಬ್ಲೂಸಿ ಅಡಿಯಲ್ಲಿನ ಕಟ್ಟುಪಾಡುಗಳಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಸಮಾವೇಶದ ನಿಬಂಧನೆಗಳ ಪ್ರಕಾರ ಮತ್ತು ಸಂಬಂಧಪಟ್ಟ ಪಕ್ಷಗಳ ನಡುವಿನ ಸಮಾಲೋಚನೆಗಳು ಮತ್ತು ಸಹಕಾರದ ಮೂಲಕ ತಿಳಿಸಬೇಕು ಎಂದು ಅವರು ತಿಳಿಸಿದ್ದಾರೆ.

India at UNSC backs convention prohibiting biological weapons
ವಿನಾಸಕಾರಿ ಜೈವಿಕ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಭಾರತ ಬೆಂಬಲ
author img

By

Published : Mar 19, 2022, 7:49 AM IST

ನ್ಯೂಯಾರ್ಕ್​: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನ ಸಂಪೂರ್ಣವಾಗಿ ನಿಷೇಧಿಸುವ ಪ್ರಮುಖ ಜಾಗತಿಕ ಮತ್ತು ತಾರತಮ್ಯರಹಿತ ನಿಶಸ್ತ್ರೀಕರಣ ಸಮಾವೇಶಕ್ಕೆ ಭಾರತ ಬೆಂಬಲ ಸೂಚಿಸಿದ್ದು, ಆದಷ್ಟು ಬೇಗ BTWCಯ ನಿರ್ಣಯವನ್ನು ಎಲ್ಲ ರಾಷ್ಟ್ರಗಳು ಅಕ್ಷರಶಃ ಅನುಷ್ಟಾನಗೊಳಿಸುವುದು ಪ್ರಮುಖವಾಗಿದೆ ಎಂದು ಭಾರತ ಪ್ರತಿಪಾದಿಸಿದೆ.

ಉಕ್ರೇನ್ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಭಾರತದ ಉಪ ಖಾಯಂ ಪ್ರತಿನಿಧಿ ಆರ್ ರವೀಂದ್ರ ಅವರು ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಒಪ್ಪಂದವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಂತೆ ಎಲ್ಲ ರಾಷ್ಟ್ರಗಳಿಗೆ ಕರೆ ನೀಡಿದರು. ವಿನಾಶಕಾರಿ ಶಸ್ತ್ರಾಸ್ತ್ರಗಳ ಬಳಕೆಯ ನಿಷೇಧಿಸುವ ಬಯೋಲಾಜಿಕಲ್​ ಮತ್ತು ಟಾಕ್ಸಿನ್ ವೆಪನ್ಸ್ ಕನ್ವೆನ್ಷನ್ (BTWC)ಗೆ ಭಾರತ ಪ್ರಮುಖ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಅವರ ತಿಳಿಸಿದರು.

ಎಲ್ಲ ರಾಷ್ಟ್ರಗಳು ಬಿಟಿಡಬ್ಲೂಸಿಯನ್ನು ಪರಿಣಾಮಕಾರಿಯಾಗಿ ಅಕ್ಷರಶಃ ಅನುಷ್ಠಾನಗೊಳಿಸುವುದು ಪ್ರಮುಖವಾಗಿದೆ. ಬಿಟಿಡಬ್ಲೂಸಿ ಅಡಿ ಕಟ್ಟುಪಾಡುಗಳಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಸಮಾವೇಶದ ನಿಬಂಧನೆಗಳ ಪ್ರಕಾರ ಮತ್ತು ಸಂಬಂಧಪಟ್ಟ ಪಕ್ಷಗಳ ನಡುವಿನ ಸಮಾಲೋಚನೆಗಳು ಮತ್ತು ಸಹಕಾರದ ಮೂಲಕ ತಿಳಿಸಬೇಕು ಎಂದು ಅವರು ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾರತ, ರಷ್ಯಾ ಒಕ್ಕೂಟ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ರಾಜತಾಂತ್ರಿಕ ಮಾತುಕತೆಗಳನ್ನು ಸ್ವಾಗತಿಸುವುದಾಗಿ ಹೇಳಿದೆ. ನಿನ್ನೆ ವಿವರಿಸಿದಂತೆ, ಉಕ್ರೇನ್‌ನಲ್ಲಿ ಹಂತಹಂತವಾಗಿ ಕ್ಷೀಣಿಸುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸುತ್ತದೆ. ನಾವು ಇತ್ತೀಚಿನ ಎರಡು ರಾಷ್ಟ್ರಗಳ ರಾಜತಾಂತ್ರಿಕ ಮಾತುಕತೆ ಸ್ವಾಗತಿಸುತ್ತೇವೆ ಎಂದು ಭಾರತೀಯ ರಾಜತಾಂತ್ರಿಕರು ಹೇಳಿದ್ದಾರೆ.

ಇದನ್ನೂ ಓದಿ:ಸ್ಫೋಟಗೊಳ್ಳದ ಶಸ್ತ್ರಾಸ್ತ್ರ ನಿಷ್ಕ್ರಿಯಗೊಳಿಸಲು ವರ್ಷಗಳು ಬೇಕಾಗಬಹುದು: ಉಕ್ರೇನ್​ ಅಳಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.